ಜಲಫಿರಂಗಿ ಬಳಕೆ: ಮಸೀದಿಯಲ್ಲಿ ಕ್ಷಮೆ ಕೋರಿದ ಹಾಂಕಾಂಗ್ ನಾಯಕಿ

Update: 2019-10-21 16:41 GMT

 ಹಾಂಕಾಂಗ್, ಅ. 21: ಹಾಂಕಾಂಗ್‌ನಲ್ಲಿ ಪ್ರತಿಭಟನಕಾರರನ್ನು ಚದುರಿಸುವ ವೇಳೆ ಪೊಲೀಸರು ಮಸೀದಿಯೊಂದರ ಮೇಲೆ ಜಲಫಿರಂಗಿ ಧಾರೆಯನ್ನು ಹರಿಸಿರುವುದಕ್ಕಾಗಿ ನಗರದ ನಾಯಕಿ ಕ್ಯಾರೀ ಲ್ಯಾಮ್ ಸೋಮವಾರ ಕ್ಷಮೆ ಯಾಚಿಸಿದ್ದಾರೆ.

ಟೋಕಿಯೊದಲ್ಲಿ ನಡೆಯಲಿರುವ ಜಪಾನ್ ಚಕ್ರವರ್ತಿ ನರುಹಿಟೊ ಅವರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಲ್ಲಿಗೆ ತೆರಳುವ ಮುನ್ನ ಲ್ಯಾಮ್ ಮಸೀದಿಗೆ ಭೇಟಿ ನೀಡಿದರು.

ರವಿವಾರದ ಪ್ರತಿಭಟನೆಗಳ ವೇಳೆ, ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಧಾರೆಯನ್ನು ಬಳಸಿದರು. ಒಂದು ಪ್ರಕರಣದಲ್ಲಿ, ಜಲಧಾರೆಯಿಂದಾಗಿ ಹಾಂಕಾಂಗ್‌ನ ಅತ್ಯಂತ ಪ್ರಮುಖ ಇಸ್ಲಾಮಿಕ್ ಆರಾಧನಾ ಸ್ಥಳವಾದ ಕೊವ್‌ಲೂನ್ ಮಸೀದಿಯ ಮುಂಭಾಗದ ದ್ವಾರ ಮತ್ತು ಮೆಟ್ಟಿಲುಗಳು ಒದ್ದೆಯಾದವು.

ಲ್ಯಾಮ್ ಸೋಮವಾರ ಮಸೀದಿಗೆ ಭೇಟಿ ನೀಡಿ ಅಲ್ಲಿನ ಧಾರ್ಮಿಕ ನಾಯಕರ ಬಳಿ ಕ್ಷಮೆ ಕೋರಿದರು ಎಂದು ಮುಖ್ಯ ಇಮಾಮ್ ಮುಹಮ್ಮದ್ ಅರ್ಶದ್‌ರ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News