ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಪರಾಧಗಳು ಹೆಚ್ಚುತ್ತಿವೆ: ಮಾಯಾವತಿ
Update: 2019-10-21 23:05 IST
ಲಕ್ನೋ,ಅ.21: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅಪರಾಧಗಳು ಹೆಚ್ಚುತ್ತಿದ್ದು,ಇದರಿಂದಾಗಿ ಶ್ರೀಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಸೋಮವಾರ ಆರೋಪಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯಲ್ಲಿ ಸಮರ್ಪಣಾ ಮನೋಭಾವ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವಂತೆ ಅವರು ಬಿಜೆಪಿಗೆ ಕಿವಿಮಾತು ಹೇಳಿದ್ದಾರೆ. ಶುಕ್ರವಾರ ಲಕ್ನೋದಲ್ಲಿ ಹಿಂದು ಸಂಘಟನೆಯೊಂದರ ಮುಖ್ಯಸ್ಥ ಕಮಲೇಶ್ ತಿವಾರಿ ಅವರ ಹತ್ಯೆಯ ಹಿನ್ನೆಲೆಯಲ್ಲಿ ಮಾಯಾವತಿಯವರ ಈ ಟ್ವಿಟರ್ ಹೇಳಿಕೆ ಹೊರಬಿದ್ದಿದೆ.