ಮಾಸ್ಕೊ ಚಾಂಪಿಯನ್ ಬೆನ್ಸಿಕ್‌ಗೆ ಭಡ್ತಿ

Update: 2019-10-21 18:31 GMT

ಪ್ಯಾರಿಸ್,ಅ.21: ಕ್ರೆಮ್ಲಿನ್ ಕಪ್ ಜಯಿಸುವ ಮೂಲಕ ವರ್ಷಾಂತ್ಯದ ಡಬ್ಲುಟಿಎ ಫೈನಲ್ಸ್‌ಗೆ ಅರ್ಹತೆ ಪಡೆದಿರುವ ಬೆಲಿಂಡಾ ಬೆನ್ಸಿಕ್ ಸೋಮವಾರ ಬಿಡುಗಡೆಯಾದ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೇರಿದರು.

ಸ್ವಿಸ್ ಆಟಗಾರ್ತಿಗೆ ಡಬ್ಲುಟಿಎ ಫೈನಲ್ಸ್‌ಗೆ ಅರ್ಹತೆ ಪಡೆಯಲು ಫೈನಲ್ ತಲುಪುವ ಅಗತ್ಯವಿತ್ತು. ಮಾಸ್ಕೊದಲ್ಲಿ 2014ರ ಚಾಂಪಿಯನ್ ಅನಸ್ತೇಸಿಯ ಪಾವ್ಲಚೆಂಕೊವಾರನ್ನು 3-6, 6-1, 6-1 ಸೆಟ್‌ಗಳ ಅಂತರದಿಂದ ಮಣಿಸಿದ ಬೆನ್ಸಿಕ್ ರ್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ.

 ಫೆಬ್ರವರಿಯಲ್ಲಿ ದುಬೈನಲ್ಲಿ ಪ್ರಶಸ್ತಿ ಜಯಿಸಿದ್ದ ಬೆನ್ಸಿಕ್ ಈ ವರ್ಷ ಜಯಿಸಿದ 2ನೇ ಪ್ರಶಸ್ತಿ ಇದಾಗಿದೆ. ಆಸ್ಟ್ರೇಲಿಯದ ಅಶ್ಲೆಘ್ ಬಾರ್ಟಿ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದು, ಝೆಕ್‌ನ ಕರೊಲಿನಾ ಪ್ಲಿಸ್ಕೋವಾ 2ನೇ ಸ್ಥಾನದಲ್ಲಿದ್ದಾರೆ.

ಬಿಯಾಂಕಾ, ಸಿಮೊನಾ ಹಾಲೆಪ್ ಹಾಗೂ ಪೆಟ್ರಾ ಕ್ವಿಟೋವಾ ಒಂದು ಸ್ಥಾನ ಭಡ್ತಿ ಪಡೆದಿದ್ದಾರೆ. ಎಲಿನಾ ಸ್ವಿಟೊಲಿನಾ ನಾಲ್ಕು ಸ್ಥಾನ ಕೆಳಗೆ ಜಾರಿ 8ನೇ ಸ್ಥಾನದಲ್ಲಿದ್ದಾರೆ. ಕಿಕಿ ಬೆರ್ಟೆನ್ಸ್ 2 ಸ್ಥಾನ ಕಳೆದುಕೊಂಡು ಅಗ್ರ-10ರಲ್ಲಿದ್ದಾರೆ.

ಡಬ್ಲುಟಿಎ ರ್ಯಾಂಕಿಂಗ್: 1. ಅಶ್ಲೆಘ್ ಬಾರ್ಟಿ(ಆಸ್ಟ್ರೇಲಿಯ), 2.ಕರೊಲಿನಾ ಪ್ಲಿಸ್ಕೋವಾ(ಝೆಕ್), 3. ನವೊಮಿ ಒಸಾಕಾ(ಜಪಾನ್),4. ಬಿಯಾಂಕಾ ಆ್ಯಂಡ್ರಿಸ್ಕೂ(ಕೆನಡಾ), 5. ಸಿಮೊನಾ ಹಾಲೆಪ್(ರೊಮಾನಿಯ), 6. ಪೆಟ್ರಾ ಕ್ವಿಟೋವಾ(ಝೆಕ್), 7. ಬೆಲಿಂಡಾ ಬೆನ್ಸಿಕ್(ಸ್ವಿಸ್), 8. ಎಲಿನಾ ಸ್ವಿಟೋಲಿನಾ(ಉಕ್ರೇನ್), 9. ಸೆರೆನಾ ವಿಲಿಯಮ್ಸ್(ಅಮೆರಿಕ), 10. ಕಿಕಿ ಬೆರ್ಟೆನ್ಸ್(ಹಾಲೆಂಡ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News