ರಾಜಸ್ಥಾನದ ಮುಖ್ಯ ಕೋಚ್ ಆಗಿ ಆ್ಯಂಡ್ರೂ ಮೆಕ್‌ಡೊನಾಲ್ಡ್ ಆಯ್ಕೆ

Update: 2019-10-21 18:46 GMT

ಮುಂಬೈ,ಅ.21: ರಾಜಸ್ಥಾನ ರಾಯಲ್ಸ್ ಕ್ರಿಕೆಟ್ ತಂಡ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಆ್ಯಂಡ್ರೂ ಮೆಕ್‌ಡೊನಾಲ್ಡ್‌ರನ್ನು ಮೂರು ವರ್ಷಗಳ ಅವಧಿಗೆ ತನ್ನ ಮುಖ್ಯ ಕೋಚ್‌ರನ್ನಾಗಿ ಸೋಮವಾರ ಆಯ್ಕೆ ಮಾಡಿದೆ.

ಮೆಕ್‌ಡೊನಾಲ್ಡ್ ಐಪಿಎಲ್‌ನ ಭಾಗವಾಗಿದ್ದು, 2009ರ ಋತುವಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಆಡಿದ್ದರು. 2012-13ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಸಹಿ ಹಾಕಿದ್ದರು. ಆರ್‌ಸಿಬಿಯ ಬೌಲಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು.

38ರ ಹರೆಯದ ಆಸ್ಟ್ರೇಲಿಯದ ಆಲ್‌ರೌಂಡರ್ ಮೆಕ್‌ಡೊನಾಲ್ಡ್ ಲೈಸೆಸ್ಟರ್‌ಶೈರ್, ವಿಕ್ಟೋರಿಯ ಹಾಗೂ ಮೆಲ್ಬೋರ್ನ್ ರೆನೆಗೆಡೆಸ್ ತಂಡಗಳಿಗೆ ಕೋಚ್ ಆಗಿದ್ದರು. ಆಸ್ಟ್ರೇಲಿಯದ ಪರ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಮೆಕ್‌ಡೊನಾಲ್ಡ್ ಸೀನಿಯರ್ ತಂಡವೊಂದರ ಕೋಚ್ ಆದ ಮೊದಲ ವರ್ಷವೇ ವಿಕ್ಟೋರಿಯ ತಂಡ ಶೀಫೀಲ್ಡ್ ಶೀಲ್ಡ್ ಟ್ರೋಫಿ ಜಯಿಸಲು ಮಾರ್ಗದರ್ಶನ ನೀಡಿದ್ದರು. ರಾಜಸ್ಥಾನ 2008ರಲ್ಲಿ ಮೊದಲ ಆವೃತ್ತಿಯ ಐಪಿಎಲ್ ಟ್ರೋಫಿಯನ್ನು ಜಯಿಸಿದ ಬಳಿಕ ಪ್ರಶಸ್ತಿಯನ್ನು ಜಯಿಸಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News