ಮೂರನೇ ಟೆಸ್ಟ್: ಕ್ಲೀನ್‌ಸ್ವೀಪ್ ಸಾಧಿಸಿದ ಕೊಹ್ಲಿ ಪಡೆ

Update: 2019-10-22 04:37 GMT

ರಾಂಚಿ, ಅ.22: ಭಾರತ ಕ್ರಿಕೆಟ್ ತಂಡ ನಿರೀಕ್ಷೆಯಂತೆಯೇ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 202 ರನ್‌ಗಳ ಅಂತರದಿಂದ ಜಯ ಸಾಧಿಸಿದೆ. ಭರ್ಜರಿ ಜಯ ಸಾಧಿಸಿರುವ ವಿರಾಟ್ ಕೊಹ್ಲಿ ಬಳಗ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡು ಕ್ಲೀನ್‌ಸ್ವೀಪ್ ಸಾಧಿಸಿದೆ.

ಭಾರತ ಇದೇ ಮೊದಲ ಬಾರಿ ಟೆಸ್ಟ್ ಸರಣಿಯಲ್ಲಿ ದ.ಆಫ್ರಿಕಾ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದೆ.

 ನಾಲ್ಕನೇ ದಿನವಾದ ಮಂಗಳವಾರ 8 ವಿಕೆಟ್ ನಷ್ಟಕ್ಕೆ 132 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ 48 ಓವರ್‌ಗಳಲ್ಲಿ 133 ರನ್‌ಗಳಿಗೆ ಆಲೌಟಾಯಿತು. ಚೊಚ್ಚಲ ಪಂದ್ಯ ಆಡುತ್ತಿರುವ ಲೋಕಲ್ ಹೀರೋ ಶಹಬಾಝ್ ನದೀಂ (2-18)ಕೊನೆಯ ಎರಡು ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಉರುಳಿಸಿದರು. ಈ ಮೂಲಕ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News