ಉತ್ತರಾಖಂಡದ ಮಾಜಿ ಸಿಎಂ ರಾವತ್ ವಿರುದ್ಧ ಸಿಬಿಐನಿಂದ ಆರೋಪಪಟ್ಟಿ ಸಲ್ಲಿಕೆ

Update: 2019-10-23 16:27 GMT

ಹೊಸದಿಲ್ಲಿ,ಅ.23: ಮೂರು ವರ್ಷಗಳ ಹಿಂದೆ ಶಾಸಕರ ಖರೀದಿ ಪ್ರಯತ್ನಕ್ಕಾಗಿ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ ರಾವತ್ ಮತ್ತು ಅವರ ಆಗಿನ ಸಂಪುಟ ಸಹೋದ್ಯೋಗಿ ಹರಕ್ ಸಿಂಗ್ ರಾವತ್ ವಿರುದ್ಧ ಸಿಬಿಐ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿಯನ್ನು ದಾಖಲಿಸಿದೆ. ಸುದ್ದಿವಾಹಿನಿಯೊಂದರ ಸಂಪಾದಕರು ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಈ ಕುದುರೆ ವ್ಯಾಪಾರದ ಪ್ರಯತ್ನ ವೀಡಿಯೊದಲ್ಲಿ ದಾಖಲಾಗಿತ್ತು. ಹರಕ್ ಸಿಂಗ್ ರಾಜ್ಯದ ಹಾಲಿ ಬಿಜೆಪಿ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿದ್ದಾಗ 2016,ಮಾ.23ರಂದು ನಡೆದಿದ್ದ ಕುದುರೆ ವ್ಯಾಪಾರ ಪ್ರಯತ್ನದ ಆರೋಪದ ಬಗ್ಗೆ ಪ್ರಾಥಮಿಕ ತನಿಖೆಯನ್ನು ನಡೆಸಿದ್ದ ಸಿಬಿಐ ವೀಡಿಯೊವನ್ನು ಗುಜರಾತಿನ ಗಾಂಧಿನಗರದಲ್ಲಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ವೀಡಿಯೊ ಅಸಲಿಯಾಗಿದೆ ಎಂದು ಪ್ರಯೋಗಾಲಯವು ತನ್ನ ವರದಿಯಲ್ಲಿ ತಿಳಿಸಿತ್ತು.

ತಾನು ಮತ್ತೆ ಅಧಿಕಾರಕ್ಕೆ ಮರಳಲು ಸಾಧ್ಯವಾಗುವಂತೆ ಬಿಜೆಪಿಗೆ ಹಾರಿದ್ದ ಅತೃಪ್ತ ಶಾಸಕರ ಬೆಂಬಲವನ್ನು ಮರಳಿ ಪಡೆದುಕೊಳ್ಳಲು ಹಣಕಾಸಿನ ಬಗ್ಗೆ ರಾವತ್ ಚರ್ಚಿಸುತ್ತಿದ್ದನ್ನು ವೀಡಿಯೊ ಸೆರೆ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News