ಫಿಫಾ ರ‍್ಯಾಂಕಿಂಗ್: 2 ಸ್ಥಾನ ಕಳೆದುಕೊಂಡ ಭಾರತ

Update: 2019-10-24 18:03 GMT

ಹೊಸದಿಲ್ಲಿ,ಅ.24: ಈ ತಿಂಗಳಾರಂಭದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ 1-1ರಿಂದ ಡ್ರಾ ಸಾಧಿಸಿರುವ ಭಾರತ ಫುಟ್ಬಾಲ್ ತಂಡ ಫಿಫಾ ರ‍್ಯಾಂಕಿಂಗ್ ನಲ್ಲಿ ಎರಡು ಸ್ಥಾನ ನಷ್ಟ ಅನುಭವಿಸಿ 106ನೇ ಸ್ಥಾನಕ್ಕೆ ಕುಸಿದಿದೆ.

 ಸೆಪ್ಟಂಬರ್‌ನಲ್ಲಿ ಏಶ್ಯನ್ ಚಾಂಪಿಯನ್ ಖತರ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ ಗಮನಾರ್ಹ ಪ್ರದರ್ಶನ ನೀಡಿದ್ದ ಭಾರತ ತಂಡ ಬಾಂಗ್ಲಾ ವಿರುದ್ಧ ಕೋಲ್ಕತಾದಲ್ಲಿ ನಡೆದ ಪಂದ್ಯವನ್ನು 1-1ರಿಂದ ಡ್ರಾ ಗೊಳಿಸಿತ್ತು.

ಭಾರತ ವಿರುದ್ಧ ಡ್ರಾ ಸಾಧಿಸಿರುವ ಬಾಂಗ್ಲಾದೇಶ ಮೂರು ಸ್ಥಾನ ಮೇಲಕ್ಕೇರಿ 184ನೇ ಸ್ಥಾನಕ್ಕೆ ಭಡ್ತಿ ಪಡೆದಿದೆ. ಬೆಲ್ಜಿಯಂ ಅಗ್ರಸ್ಥಾನ ಉಳಿಸಿಕೊಂಡಿದ್ದು, ಫ್ರಾನ್ಸ್ ಹಾಗೂ ಬ್ರೆಝಿಲ್ ಆ ಬಳಿಕದ ಸ್ಥಾನದಲ್ಲಿವೆ.

ಉರುಗ್ವೆ(5ನೇ ಸ್ಥಾನ), ಕ್ರೊಯೇಶಿಯ(7ನೇ), ಅರ್ಜೆಂಟೀನ(9ನೇ)ತಲಾ ಒಂದುಸ್ಥಾನದಲ್ಲಿ ಭಡ್ತಿ ಪಡೆದಿವೆ. ಉರುಗ್ವೆ, ಪೋರ್ಚುಗಲ್, ಕ್ರೊಯೇಶಿಯ, ಸ್ಪೇನ್, ಅರ್ಜೆಂಟೀನ ಹಾಗೂ ಕೊಲಂಬಿಯಾವನ್ನು ಹಿಂದಿಕ್ಕಿದ ಇಂಗ್ಲೆಂಡ್ ನಾಲ್ಕನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News