ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧುಗೆ ಸೋಲಿನ ಆಘಾತ

Update: 2019-10-26 05:24 GMT

ಪ್ಯಾರಿಸ್,ಅ.26: ಭಾರತದ ಶಟ್ಲರ್ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋತು ಹೊರ ನಡೆದಿದ್ದಾರೆ. ಈ ಮೂಲಕ ತನ್ನ ಸೋಲಿನ ಸರಪಳಿ ಮುಂದುವರಿಸಿದ್ದಾರೆ.

ಸಿಂಧು ಶುಕ್ರವಾರ ತಡರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ತೈವಾನ್‌ನ ತೈ ಝು ಯಿಂಗ್ ವಿರುದ್ಧ 16-21, 26-24, 17-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

24ರ ಹರೆಯದ ಸಿಂಧು ಮೊದಲ ಗೇಮ್‌ನ್ನು 16-21 ಅಂತರದಿಂದ ಸೋತಿದ್ದು, ಎರಡನೇ ಗೇಮ್‌ನ್ನು 26-24 ಅಂತರದಿಂದ ಗೆದ್ದುಕೊಂಡು ತಿರುಗೇಟು ನೀಡಿದರು. 75 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಯಿಂಗ್ ಜಯಶಾಲಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News