ಜಮ್ಮು-ಕಾಶ್ಮೀರದ ಜನರಿಗೆ ನಿರಾಕರಿಸಲಾದ ಹಕ್ಕುಗಳನ್ನು ಮರುಸ್ಥಾಪಿಸಿ: ವಿಶ್ವಸಂಸ್ಥೆ ಟ್ವೀಟ್

Update: 2019-10-29 16:51 GMT

ಹೊಸದಿಲ್ಲಿ, ಅ.29: ಜಮ್ಮು-ಕಾಶ್ಮೀರದ ಜನತೆಯನ್ನು ಮಾನವ ಹಕ್ಕುಗಳಿಂದ ವಂಚಿತರನ್ನಾಗಿಸಿರುವ ಬಗ್ಗೆ ವಿಶ್ವಸಂಸ್ಥೆಯು ಮಂಗಳವಾರ ಕಳವಳವನ್ನು ವ್ಯಕ್ತಪಡಿಸಿದೆ. ಐರೋಪ್ಯ ಒಕ್ಕೂಟದ ಸಂಸದರ ನಿಯೋಗವೊಂದು ಜಮ್ಮು-ಕಾಶ್ಮೀರಕ್ಕೆ ತನ್ನ ಭೇಟಿಯನ್ನು ಆರಂಭಿಸಿದ ದಿನವೇ ವಿಶ್ವಸಂಸ್ಥೆಯ ಈ ಕಳವಳ ವ್ಯಕ್ತವಾಗಿದೆ.

 ನಿರ್ಬಂಧಗಳನ್ನು ಹಿಂದೆಗೆದುಕೊಳ್ಳುವಂತೆ ಮತ್ತು ಜಮ್ಮು-ಕಾಶ್ಮೀರದ ಜನರಿಗೆ ಈಗ ನಿರಾಕರಿಸಲಾಗಿರುವ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸುವಂತೆ ವಿಶ್ವಸಂಸ್ಥೆಯು ಟ್ವೀಟ್ ಮೂಲಕ ಭಾರತಕ್ಕೆ ಸೂಚಿಸಿದೆ.

ಮಾನವ ಹಕ್ಕುಗಳ ರಾಯಭಾರಿ ಕಚೇರಿಯ ವಕ್ತಾರ ರುಪರ್ಟ್ ಕೋಲ್‌ವಿಲೆ ಅವರು ವಿಶ್ವಸಂಸ್ಥೆಯ ಜಿನಿವಾ ಕಚೇರಿಯ ಅಧಿಕೃತ ಹ್ಯಾಂಡಲ್‌ನಿಂದ ಮಾಡಿರುವ ಟ್ವೀಟ್‌ನಲ್ಲಿ,ಕಾಶ್ಮೀರದ ಜನರನ್ನು ಹಲವಾರು ಮಾನವ ಹಕ್ಕುಗಳಿಂದ ವಂಚಿತರನ್ನಾಗಿಸಿರುವುದು ಮುಂದುವರಿದಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News