ನವಾಝ್ ಶರೀಫ್‌ಗೆ 2 ವಾರಗಳ ಜಾಮೀನು

Update: 2019-10-30 17:19 GMT

ಇಸ್ಲಾಮಾಬಾದ್, ಅ. 30: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ಎರಡು ವಾರಗಳ ಕಾಲ ಅಮಾನತಿನಲ್ಲಿಟ್ಟಿದೆ. ಮಾಜಿ ಪ್ರಧಾನಿಯ ರಕ್ತದ ಪ್ಲೇಟ್‌ಲೆಟ್ ಕಣಗಳ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.

ಅವರ ರಕ್ತದ ಪ್ಲೇಟ್‌ಲೆಟ್ ಕಣಗಳ ಸಂಖ್ಯೆ ಅತ್ಯಂತ ಕೆಳ ಮಟ್ಟವಾದ 2000ಕ್ಕೆ ಕುಸಿದ ಬಳಿಕ, ಅಕ್ಟೋಬರ್ 21ರ ರಾತ್ರಿ ಅವರನ್ನು ಲಾಹೋರ್‌ನ ಸರ್ವಿಸಸ್ ಆಸ್ಪತ್ರೆಗೆ ಸೇರಿಸಲಾಗಿತ್ತು.

ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ, ಅಲ್-ಅಝೀಝಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ 69 ವರ್ಷದ ಮಾಜಿ ಪ್ರಧಾನಿ ಅನುಭವಿಸುತ್ತಿರುವ 7 ವರ್ಷಗಳ ಜೈಲು ಶಿಕ್ಷೆಯನ್ನು ಎರಡು ವಾರಗಳ ಕಾಲ ಅಮಾನತಿನಲ್ಲಿಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News