ಅಫ್ಘಾನ್: ವಾಯು ದಾಳಿ; 47 ತಾಲಿಬಾನ್ ಉಗ್ರರು ಹತ
Update: 2019-10-30 23:09 IST
ಝಾಬುಲ್ (ಅಫ್ಘಾನಿಸ್ತಾನ), ಅ. 30: ಅಫ್ಘಾನಿಸ್ತಾನದ ಝಾಬುಲ್ ಪ್ರಾಂತದಲ್ಲಿ ಅಫ್ಘಾನ್ ವಾಯು ಸೇನೆಯು ಮಂಗಳವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 47 ತಾಲಿಬಾನ್ ಭಯೋತ್ಪಾದಕರು ಹತರಾಗಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ.
ಶಿಂಕಿ ಮತ್ತು ನವ್‌ಬಾಹರ್ ಜಿಲ್ಲೆಗಳಲ್ಲಿರುವ ಭಯೋತ್ಪಾದಕ ಅಡಗುದಾಣಗಳನ್ನು ಗುರಿಯಾಗಿಸಿ ವಿದೇಶಿ ಸೈನಿಕರು ದಾಳಿ ನಡೆಸಿದರು ಎಂದು ಸೇನೆಯ ವಕ್ತಾರರೊಬ್ಬರು ತಿಳಿಸಿದರು. ದಾಳಿಯಲ್ಲಿ ತಾಲಿಬಾನ್‌ನಿಂದ ನಿಯೋಜಿಸಲ್ಪಟ್ಟಿದ್ದ ಜಿಲ್ಲಾ ಗವರ್ನರ್ ಸೇರಿದಂತೆ 47 ಮಂದಿ ಮೃತಪಟ್ಟರು ಎಂದು ‘ಸ್ಪೂತ್ನಿಕ್’ ವರದಿ ಮಾಡಿದೆ.
ಈ ನಡುವೆ, ಉರುಝ್ಗನ್ ಪ್ರಾಂತದಲ್ಲಿ ಗಿಝಬ್ ಜಿಲ್ಲೆಯಲ್ಲಿರುವ ತಾಲಿಬಾನ್ ನೆಲೆಗಳ ಮೇಲೆ ನಡೆದ ವಾಯು ದಾಳಿಯಲ್ಲಿ ಇನ್ನೂ 11 ಉಗ್ರರು ಹತರಾಗಿದ್ದಾರೆ.