ಫಿಲಿಪ್ಪೀನ್ಸ್‌ನಲ್ಲಿ ಪ್ರಬಲ ಭೂಕಂಪ: ಕುಸಿದ ಹೊಟೇಲ್ ಕಟ್ಟಡ

Update: 2019-10-31 17:36 GMT

ಮನಿಲಾ, ಆ. 31: ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿನ ಮಧ್ಯ ಮಿಂಡನಾವೊದಲ್ಲಿ ರಿಕ್ಟರ್ ಮಾಪಕದಲ್ಲಿ 6.5ರಷ್ಟಿದ್ದ ಭೂಕಂಪ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಭೂಕಂಪದ ಪರಿಣಾಮವಾಗಿ ಕಿಡಪವನ್ ನಗರದಲ್ಲಿನ ಹೊಟೇಲೊಂದು ಕುಸಿದಿದೆ. ಆದರೆ ಆ ಹೊತ್ತಿನಲ್ಲಿ ಹೊಟೇಲ್‌ನೊಳಗೆ ಯಾರೂ ಇರಲಿಲ್ಲ ಎಂದು ಕಿಡಪವನ್ ನಗರದ ಮೇಯರ್ ಜೋಸೆಫ್ ಇವಾಂಜೆಲಿಸ್ಟ ಡಿಝಡ್‌ಎಂಎಂ ರೇಡಿಯೊಗೆ ತಿಳಿಸಿದರು.

ಭೂಕಂಪದಿಂದ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಗಳು ಬಂದಿಲ್ಲ. ಇದು ಅಕ್ಟೋಬರ್ 16ರ ಬಳಿಕ, ಈ ವಲಯದಲ್ಲಿ ಸಂಭವಿಸಿರುವ ಮೂರನೇ ಭೂಕಂಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News