ಭಾರತ ಮೂಲದ ಸಂಸದ 6 ತಿಂಗಳ ಅವಧಿಗೆ ಅಮಾನತು

Update: 2019-11-01 17:21 GMT

ಲಂಡನ್, ನ. 1: ಬ್ರಿಟನ್‌ನ ಲೇಬರ್ ಪಕ್ಷದ ಭಾರತ ಮೂಲದ ಸಂಸದ ಕೀತ್ ವಾಝ್‌ರನ್ನು ಬ್ರಿಟನ್ ಸಂಸತ್ತಿನ ಕೆಳಮನೆ ಹೌಸ್ ಆಫ್ ಕಾಮನ್ಸ್ ಗುರುವಾರ ಆರು ತಿಂಗಳ ಅವಧಿಗೆ ಅಮಾನತುಗೊಳಿಸಿದೆ.

ಅವರು ಸದನದ ಘನತೆ ಮತ್ತು ಪ್ರಾಮಾಣಿಕತೆಗೆ ಹಾನಿ ಮಾಡಿದ್ದಾರೆ ಎಂಬುದಾಗಿ ಕಾಮನ್ಸ್ ಗುಣಮಟ್ಟಗಳ ಸಮಿತಿ ಸಲ್ಲಿಸಿದ ವರದಿಯನ್ನು ಹೌಸ್ ಆಫ್ ಕಾಮನ್ಸ್ ಅಂಗೀಕರಿಸಿದೆ.

ಅವರು ಮಾದಕ ದ್ರವ್ಯ ಹಗರಣವೊಂದರಲ್ಲಿ ಭಾಗಿಯಾಗಿರುವುದು 2016ರಲ್ಲಿ ನಡೆದ ಸ್ಟಿಂಗ್ ಆಪರೇಶನ್ ಒಂದರಲ್ಲಿ ಪತ್ತೆಯಾಗಿತ್ತು ಹಾಗೂ ಅದು ದೊಡ್ಡ ಸುದ್ದಿಯಾಗಿತ್ತು.

62 ವರ್ಷದ ವಾಝ್ ಅತಿ ದೀರ್ಘ ಅವಧಿಗೆ ಸಂಸತ್‌ಗೆ ಆಯ್ಕೆಯಾದ ಭಾರತೀಯ ಮತ್ತು ಏಶ್ಯದ ಸಂಸದರಾಗಿದ್ದಾರೆ. ಅವರು 1987ರಿಂದ ಲೀಸೆಸ್ಟರ್ ಈಸ್ಟ್ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News