×
Ad

ಕರ್ನಾಲ್ ನಲ್ಲಿ ಬೋರ್ವೆಲ್ ಗೆ ಬಿದ್ದ ಐದರ ಹರೆಯದ ಬಾಲಕಿ ಮೃತ್ಯು

Update: 2019-11-04 13:10 IST

ಹರಿಯಾಣ, ನ.4: ಹರ್ಯಾಣದ  ಕರ್ನಾಲ್‌ನಲ್ಲಿ ಬೋರ್‌ವೆಲ್‌ಗೆ ಬಿದ್ದು  18 ಗಂಟೆಗಳ ಕಾಲ ಸಿಲುಕಿಕೊಂಡಿದ್ದ  5 ವರ್ಷದ  ಬಾಲಕಿ ಶಿವಾನಿ  ಸಾವನ್ನಪ್ಪಿದ್ದಾಳೆ.  

 ರವಿವಾರ ತಮ್ಮ ಕುಟುಂಬಕ್ಕೆ ಸೇರಿದ ಹೊಲದಲ್ಲಿ ಆಡುತ್ತಿದ್ದಾಗ ಶಿವಾನಿ ಅಲ್ಲಿ ಕೊರೆಯಲಾಗದ್ದ  ನೀರಿಲ್ಲದ 50 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದಾಳೆ.

ಎನ್ ಡಿಆಫ್ ತಂಡ  ಕಾರ್ಯಾಚರಣೆ ನಡೆಸಿ ಬೋರ್‌ವೆಲ್‌ನಿಂದ ತೆಗೆದಿತ್ತು. ಬಳಿಕ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News