ಅಫ್ಘಾನ್: ಪಾಕ್ ಕೌನ್ಸುಲರ್ ಕಚೇರಿ ಅನಿರ್ದಿಷ್ಟಾವಧಿ ಬಂದ್

Update: 2019-11-04 17:59 GMT

ಕಾಬೂಲ್, ನ. 4: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ತನ್ನ ಕೌನ್ಸುಲರ್ ಕಚೇರಿಯನ್ನು ಅನಿರ್ದಿಷ್ಟಾವಧಿಗೆ ಮುಚ್ಚುವುದಾಗಿ ಕಾಬೂಲ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ರವಿವಾರ ತಿಳಿಸಿದೆ. ನೆರೆಹೊರೆಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಭದ್ರತಾ ಕಾರಣಗಳಿಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಪಾಕ್ ರಾಯಭಾರ ಕಚೇರಿಯ ವೀಸಾ ವಿಭಾಗ (ಕೌನ್ಸುಲರ್)ವನ್ನು ಮುಚ್ಚಿರುವುದು ಹೆಚ್ಚಿನ ಸಂಖ್ಯೆಯ ಅಫ್ಘನ್ನರಿಗೆ ದೊಡ್ಡ ಹೊಡೆತವಾಗಿದೆ. ಪಾಕಿಸ್ತಾನದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು, ಶಿಕ್ಷಣ ಪಡೆಯಲು ಹಾಗೂ ವಸ್ತುಗಳನ್ನು ಖರೀದಿಸಲು ಆ ದೇಶಕ್ಕೆ ಹೋಗುವುದಕ್ಕಾಗಿ ಪ್ರತಿ ದಿನ ನೂರಾರು ಅಫ್ಘನ್ನರು ವೀಸಾಗಳಿಗಾಗಿ ಅರ್ಜಿ ಸಲ್ಲಿಸುತ್ತಾರೆ.

ಕೌನ್ಸುಲರ್ ವಿಭಾಗವು ಸೋಮವಾರದಿಂದ ‘‘ಮುಂದಿನ ಮಾಹಿತಿಯವರೆಗೆ’’ ಮುಚ್ಚಿರುತ್ತದೆ ಎಂದು ಪಾಕಿಸ್ತಾನ ರಾಯಭಾರ ಕಚೇರಿಯ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News