ಕಪ್ಪು ಹಣ ಬಿಳುಪು ಪ್ರಕರಣ: ಮರ್ಯಮ್ ನವಾಝ್‌ಗೆ ಜಾಮೀನು

Update: 2019-11-04 18:23 GMT

ಲಾಹೋರ್, ನ. 4: ಕಪ್ಪು ಹಣ ಬಿಳುಪು ಮಾಡಿದ ಪ್ರಕರಣದಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಪುತ್ರಿ ಮರ್ಯಮ್ ನವಾಝ್‌ಗೆ ಪಾಕಿಸ್ತಾನ ನ್ಯಾಯಾಲಯವೊಂದು ಸೋಮವಾರ ಜಾಮೀನು ನೀಡಿದೆ.

ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ, ಲಾಹೋರ್ ಹೈಕೋರ್ಟ್‌ನ ಇಬ್ಬರು ಸದಸ್ಯರ ಪೀಠವೊಂದು ಅವರಿಗೆ ಜಾಮೀನು ನೀಡಿತು. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಅಕ್ಟೋಬರ್ 31ರಂದು ತೀರ್ಪನ್ನು ಕಾಯ್ದಿರಿಸಿತ್ತು.

‘‘ಅರ್ಹತೆಗಳು ಮತ್ತು ಮಾನವೀಯ ನೆಲೆಗಳ ಆಧಾರದಲ್ಲಿ’’ ಜಾಮೀನು ನೀಡುವಂತೆ ಮರ್ಯಮ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ‘ಗಂಭೀರ’ ಪರಿಸ್ಥಿತಿಯಲ್ಲಿರುವ ತನ್ನ ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ತನ್ನ ಮೇಲಿದೆ ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News