ಬೆನಿನ್ ದೇಶದಲ್ಲಿ ಕಡಲ್ಗಳ್ಳರಿಂದ 9 ನಾವಿಕರ ಅಪಹರಣ

Update: 2019-11-04 18:24 GMT

ಕೊಟೊನು (ಬೆನಿನ್), ನ. 4: ಪಶ್ಚಿಮ ಆಫ್ರಿಕದ ಬೆನಿನ್ ದೇಶದ ಕೊಟೊನು ಬಂದರಿನಲ್ಲಿ ಕಾಯುತ್ತಿದ್ದ ಒಂಬತ್ತು ನಾವಿಕರನ್ನು ಶಂಕಿತ ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ಬಂದರು ಅಧಿಕಾರಿಗಳು ರವಿವಾರ ಹೇಳಿದ್ದಾರೆ.

‘‘ಶನಿವಾರ ಬೆಳಗ್ಗೆ ಬಂದರು ಪ್ರದೇಶದಲ್ಲಿ ಕಡಲ್ಗಳ್ಳತನದ ಘಟನೆ ನಡೆದಿದೆ ಎಂದು ತಿಳಿಸಲು ಸ್ವಾಯತ್ತ ಕೊಟೊನು ಬಂದರು ವಿಷಾದಿಸುತ್ತದೆ’’ ಎಂದು ಅಧಿಕಾರಿಗಳು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಬಂದರಿನ ದ್ವಾರದಿಂದ ಸುಮಾರು 14 ಕಿಲೋಮೀಟರ್ ದೂರದಲ್ಲಿ ‘ಬೊನಿಟ’ ಎಂಬ ಹಡಗಿನ ಮೇಲೆ ಕಡಲ್ಗಳ್ಳರು ದಾಳಿ ನಡೆಸಿ, ಹಡಗಿನ ಕ್ಯಾಪ್ಟನ್ ಮತ್ತು 8 ನಾವಿಕರನ್ನು ಅಪಹರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News