ಭೂಗತ ಸ್ಥಾವರದಲ್ಲಿ ಯುರೇನಿಯಂ ಸಂವರ್ಧನೆ ಪುನರಾರಂಭ

Update: 2019-11-05 17:35 GMT

ಟೆಹರಾನ್, ನ. 5: ದಕ್ಷಿಣ ಟೆಹರಾನ್‌ನ ಭೂಗತ ಸ್ಥಾವರವೊಂದರಲ್ಲಿ ಯುರೇನಿಯಂ ಸಂವರ್ಧನೆಯನ್ನು ಪುನರಾರಂಭಿಸುವುದಾಗಿ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಮಂಗಳವಾರ ಹೇಳಿದ್ದಾರೆ. ಇದರೊಂದಿಗೆ ಅದು 2015ರಲ್ಲಿ ಜಾಗತಿಕ ಶಕ್ತಿಗಳೊಂದಿಗೆ ಮಾಡಿಕೊಂಡ ಪರಮಾಣು ಒಪ್ಪಂದದಿಂದ ದೊಡ್ಡ ಮಟ್ಟದಲ್ಲಿ ಹಿಂದೆ ಸರಿದಂತಾಗಿದೆ.

ಪರಮಾಣು ಒಪ್ಪಂದದ ಬಳಿಕ, ಶಿಯಾ ಪಂಥೀಯರ ಪವಿತ್ರ ನಗರ ಕೋಮ್ ಸಮೀಪದಲ್ಲಿರುವ ಪರ್ವತದಲ್ಲಿರುವ ಫೋರ್ಡೌ ಸ್ಥಾವರದಲ್ಲಿ ನಡೆಯುತ್ತಿದ್ದ ಎಲ್ಲ ಯುರೇನಿಯಂ ಸಂವರ್ಧನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದು ಒಪ್ಪಂದದ ಶರತ್ತುಗಳಲ್ಲಿ ಒಂದಾಗಿತ್ತು.

ಆದರೆ, ಈ ಒಪ್ಪಂದದಿಂದ ಅಮೆರಿಕ ಕಳೆದ ವರ್ಷದ ಮೇ ತಿಂಗಳಲ್ಲಿ ಹಿಂದೆ ಬಂದಿದೆ ಹಾಗೂ ಇರಾನ್ ವಿರುದ್ಧ ಕಠಿಣ ಆರ್ಥಿಕ ದಿಗ್ಬಂಧನಗಳನ್ನು ಮರುಹೇರಿದೆ. ಈ ಹಿನ್ನೆಲೆಯಲ್ಲಿ, ಈ ವರ್ಷದ ಮೇ ತಿಂಗಳಿನಿಂದ ಒಪ್ಪಂದದಡಿಯ ತನ್ನ ಬದ್ಧತೆಗಳಿಂದ ಇರಾನ್ ಹಂತ ಹಂತವಾಗಿ ಹಿಂದೆ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News