ಹಾಂಕಾಂಗ್ ನಾಯಕಿ ಮೇಲೆ ‘ಸಂಪೂರ್ಣ ನಂಬಿಕೆ’ ವ್ಯಕ್ತಪಡಿಸಿದ ಚೀನಾ ಅಧ್ಯಕ್ಷ

Update: 2019-11-05 18:02 GMT

ಬೀಜಿಂಗ್, ನ. 5: ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರೀ ಲಾಮ್ ಸೋಮವಾರ ಚೀನಾದ ಶಾಂಘೈ ನಗರದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷರು ಹಾಂಕಾಂಗ್ ಅಧಿಕಾರಿಯ ಮೇಲೆ ‘ಅತ್ಯುನ್ನತ ಮಟ್ಟದ ನಂಬಿಕೆ’ಯನ್ನು ವ್ಯಕ್ತಪಡಿಸಿದರು.

ಹಾಂಕಾಂಗ್‌ನ ಆರೋಪಿಗಳನ್ನು ವಿಚಾರಣೆಗಾಗಿ ಮಾತೃಭೂಮಿ ಚೀನಾಕ್ಕೆ ಗಡಿಪಾರು ಮಾಡುವ ಕಾನೂನನ್ನು ವಿರೋಧಿಸಿ ಹಾಂಕಾಂಗ್‌ನಲ್ಲಿ ಜೂನ್‌ನಲ್ಲಿ ಆರಂಭಗೊಂಡಿರುವ ಬೃಹತ್ ಪ್ರತಿಭಟನೆಗಳು ಈಗಲೂ ಮುಂದುವರಿಯುತ್ತಿವೆ.

ಶಾಂತಿಯುತ ಪ್ರತಿಭಟನೆಗಳು ಹಿಂಸಾತ್ಮಕ ಪ್ರತಿಭಟನೆಗಳಾಗಿ ಮಾರ್ಪಟ್ಟವು ಹಾಗೂ ವಾರಾಂತ್ಯಗಳಲ್ಲಿ ನಿಯಮಿತವಾಗಿ ಪ್ರತಿಭಟನೆಗಳು ನಡೆಯುತ್ತಿದ್ದವು.

ಹಿಂಸಾತ್ಮಕ ಪ್ರತಿಭಟನೆಗಳನ್ನು ಕೊನೆಗೊಳಿಸಲು ವಿಫಲವಾಗಿರುವುದಕ್ಕಾಗಿ ಹಾಂಕಾಂಗ್ ನಾಯಕಿಯನ್ನು ಚೀನಾ ಬದಲಾಯಿಸಬಹುದು ಎನ್ನುವ ಊಹಾಪೋಹಗಳಿದ್ದವು.

 ‘‘ಲ್ಯಾಮ್ ಮೇಲೆ ಕ್ಸಿ ಉನ್ನತ ಮಟ್ಟದ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಅವರು ಮತ್ತು ಅವರ ಆಡಳಿತ ತಂಡದ ಕೆಲಸವನ್ನು ಗಮನಿಸಿದ್ದಾರೆ’’ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News