ಪಿಎಂ ಕಿಸಾನ್ ಸಮ್ಮಾನ್: ರೈತರಿಗೆ ತಾರತಮ್ಯ

Update: 2019-11-05 18:34 GMT

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 2020ರ ಮಾರ್ಚ್ ತಿಂಗಳ ಅಂತ್ಯದಲ್ಲಿ ಬಾಕಿಯಿರುವ ಎಲ್ಲಾ ನಾಲ್ಕು ಕಂತುಗಳನ್ನು ಪಡೆಯಲು ದೇಶದ ಕೇವಲ 4.12 ಕೋಟಿ ರೈತ ಕುಟುಂಬಗಳು ಅರ್ಹತೆಯನ್ನು ಹೊಂದಿವೆ ಎಂದು ಈ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.

 ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯವು ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿಸಿಕೊಂಡಿರುವ ಎಲ್ಲಾ ರೈತರಿಗೆ ಪೂರ್ವಾನ್ವಯವಾಗುವ ಹಾಗೆ ಹಣ ಪಾವತಿಸದೆ ಇರಲು ನಿರ್ಧರಿಸಿದೆ. ಹೀಗಾಗಿ ಕೇವಲ ಮೊದಲ ಸಲದ ಅವಧಿಯಲ್ಲಿ ನೋಂದಣಿಗೊಂಡಿರುವ ಕೇವಲ 4.12 ಕೋಟಿ ರೈತರಷ್ಟೇ ಎಲ್ಲಾ ನಾಲ್ಕು ಕಂತುಗಳನ್ನು ಸ್ವೀಕರಿಸಲು ಅರ್ಹರಾಗಿದ್ದಾರೆ.

 ಕೇಂದ್ರ ಸರಕಾರದ ಮೂಲ ಅಂದಾಜಿನ ಪ್ರಕಾರ, 12.5 ಕೋಟಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ತಲಾ 2 ಸಾವಿರ ರೂ.ಗಳಂತೆ ಮೂರು ಕಂತುಗಳಲ್ಲಿ ಒಂದು ಹಣಕಾಸು ವರ್ಷದಲ್ಲಿ ಪಡೆಯಲಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಎನ್‌ಡಿಎ ಸರಕಾರವು ಎರಡನೇ ಅವಧಿಗೆ ಅಧಿಕಾರಕ್ಕೆ ಮರಳಿದಾಗ ಈ ಯೋಜನೆಯ ಸೌಲಭ್ಯವನ್ನು ಎಲ್ಲಾ ರೈತರಿಗೆ ವಿಸ್ತರಿಸಿದಾಗ ಫಲಾನುಭವಿಗಳ ಸಂಖ್ಯೆ 14 ಕೋಟಿಗೇರಿದೆ.

ಈ ಯೋಜನೆಯನ್ನು ಆರಂಭಿಸಿದಾಗ ಕೇಂದ್ರ ಸರಕಾರದ ಬಳಿ ರೈತರ ದತ್ತಾಂಶವು ಇದ್ದಿರಲಿಲ್ಲ. ರಾಜ್ಯ ಸರಕಾರಗಳಿಗೆ ಸಮಗ್ರ 75 ಸಾವಿರ ಕೋಟಿ ರೂ.ಗಳ ಅನುದಾನವನ್ನು ಒದಗಿಸಲು ಸಾಧ್ಯವಾಗದಿರುವುದು ಯಾಕೆಂದರೆ, ತಮ್ಮ ರಾಜ್ಯಗಳಲ್ಲಿ ರೈತರ ದತ್ತಾಂಶಗಳನ್ನು ಒದಗಿಸಲು ರಾಜ್ಯ ಸರಕಾರಗಳು ವಿಳಂಬಿಸಿದ್ದವು ಹಾಗೂ ಪಶ್ಚಿಮಬಂಗಾಳದಂತೆ ಕೆಲವು ರಾಜ್ಯಗಳು ಯಾವುದೇ ದತ್ತಾಂಶಗಳನ್ನು ಒದಗಿಸಿರಲಿಲ್ಲವೆಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್ ಅಗರ್ವಾಲ್ ಹೇಳುತ್ತಾರೆ.

ಒಂದು ವೇಳೆ ಕಿಸಾನ್ ಸಮ್ಮಾನ್ ಯೋಜನೆಯನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿದಲ್ಲಿ ದೇಶದ ಎಲ್ಲಾ ರೈತ ಕುಟುಂಬಗಳು ಪ್ರತಿ ಕಂತಿಗೆ ಎರಡು ಸಾವಿರ ರೂ.ಗಳಂತೆ ನಾಲ್ಕು ಕಂತುಗಳಲ್ಲಿ ಪಡೆಯಬಹುದಾಗಿತ್ತು. ಮೊದಲ ಕಂತು 2018-19ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ್ದಾಗಿತ್ತು. ಈ ಯೋಜನೆಯ ಹಣವನ್ನು 2019ರ ಮೇ ತಿಂಗಳ ಲೋಕಸಭಾ ಚುನಾವಣೆಗಳ ಆರಂಭಕ್ಕೆ ಪಾವತಿಸುವುದನ್ನು ಖಾತರಿಪಡಿಸುವುದಕ್ಕಾಗಿ ಯೋಜನೆಯನ್ನು ಪೂರ್ವಾನ್ವಯಗೊಳಿಸಲಾಗಿತ್ತು.

2018ರ ಡಿಸೆಂಬರ್‌ನಿಂದ 2019ರ ಮಾರ್ಚ್‌ಗೆ ಈ ಹಣವನ್ನು ಪಾವತಿಸಬೇಕಾಗಿತ್ತು. ಇದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೊದಲನೆ ಕಂತಾಗಿತ್ತು.

 ಎರಡನೇ ಅವಧಿಯು ಎಪ್ರಿಲ್‌ನಲ್ಲಿ ಆರಂಭಗೊಂಡಿತ್ತು ಹಾಗೂ 2019ರ ಜುಲೈ ತಿಂಗಳಲ್ಲಿ ಕೊನೆಗೊಂಡಿತ್ತು. ಮೂರನೇ ಅವಧಿಯು 2019ರ ಆಗಸ್ಟ್‌ನಿಂದ ನವೆಂಬರ್ 2019ರವರೆಗಾಗಿತ್ತು. 2019ರ ಡಿಸೆಂಬರ್‌ನಿಂದ 2020ರ ಮಾರ್ಚ್‌ವರೆಗೆ ನಾಲ್ಕನೇ ಅವಧಿಯದ್ದಾಗಿದೆ.
ವಾಸ್ತವವಾಗಿ ಎಲ್ಲಾ ರೈತ ಕುಟುಂಬಗಳು ಈ ಅವಧಿಯ ಮೊದಲ ಕಂತನ್ನು ಹಾಗೂ ಎರಡನೇ ಅವಧಿಯ ಎರಡನೇ ಕಂತನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಹಾಗಾಗಲಿಲ್ಲ.

ಅಗರ್ವಾಲ್ ಅವರು ಒದಗಿಸಿದ ಮಾಹಿತಿಯ ಪ್ರಕಾರ ಮೊದಲ ಅವಧಿಯಲ್ಲಿ 4.12 ಕೋಟಿ ರೈತರು ಅಥವಾ ಒಟ್ಟು ರೈತರ ಶೇ.28ರಷ್ಟು ಮಂದಿ ಆದಾಯ ವರ್ಗಾವಣೆಯಡಿ 2 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದರು. ಉದಾಹರಣೆಗೆ, ಒಂದು ವೇಳೆ ರೈತರೊಬ್ಬರು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ 2019ರ ಮೇನಲ್ಲಿ ನೋಂದಣಿಯಾಗಿದ್ದರೆ, ಅಂದರೆ ಎರಡನೇ ಅವಧಿಯಲ್ಲಿ ಅವರು ತನ್ನ ಮೊದಲ ಕಂತನ್ನು ಹಾಗೂ ಮೂರನೇ ಅವಧಿಯಲ್ಲಿ ಎರಡನೇ ಕಂತನ್ನು ಪಡೆಯುವವರಿದ್ದರು.
ಕಿಸಾನ್ ಸಮ್ಮಾನ್ ಯೋಜನೆಯ ಹಣಪಾವತಿಯನ್ನು ಪೂರ್ವಾನ್ವಯವಾಗುವಂತೆ ಪಾವತಿಸದಿರಲು ಸಚಿವಾಲಯವು ನಿರ್ಧರಿಸಿದ್ದರಿಂದ ಆತ ಮೊದಲ ಅವಧಿಯ 2 ಸಾವಿರ ರೂ.ಗಳನ್ನು ಸ್ವೀಕರಿಸಲು ಅರ್ಹನಾಗಲಿಲ್ಲ.

 2020ರ ಮಾರ್ಚ್ ಕೊನೆಯವರೆಗೆ ಬಾಕಿಯಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ನಾಲ್ಕು ಕಂತುಗಳನ್ನು ಪಡೆಯಲು ಕೇವಲ 4.12 ಕೋಟಿ ರೈತಕುಟುಂಬಗಳಷ್ಟೇ ಅರ್ಹವಾಗಿವೆ ಎಂದಾಯಿತು. ಮೊದಲನೇ ಅವಧಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸದ ರೈತರಿಗೆ ಪೂರ್ವಾನ್ವಯವಾಗುವಂತೆ ಪಾವತಿಗಳನ್ನು ಮಾಡದಿರಲು ಸರಕಾರ ನಿರ್ಧರಿಸಿರುವುದರಿಂದ ನಾಲ್ಕು ಕಂತುಗಳ ಪೈಕಿ ಕನಿಷ್ಠ ಒಂದು ಕಂತನ್ನು ಪಡೆಯಲು ಅವರು ಅನರ್ಹರಾಗಿದ್ದಾರೆ.

ಇದರಿಂದಾಗಿ ಮೊದಲ ಅವಧಿಯ ಆನಂತರ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ನೋಂದಣಿಗೊಂಡ 3.05 ಕೋಟಿ ರೈತರಿಗೆ ಕನಿಷ್ಠ ಪಕ್ಷ ಮೊದಲ ಕಂತಿನ 2 ಸಾವಿರ ರೂ.ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇದೀಗ 4.12 ಕೋಟಿ ರೈತರು ನಾಲ್ಕನೆ ಕಂತಿನ 2 ಸಾವಿರ ರೂ.ಗಳನ್ನು ಸ್ವೀಕರಿಸುವ ಸಾಧ್ಯತೆಯಿದೆ ಹಾಗೂ ಹೆಚ್ಚಿನ ಸಂಖ್ಯೆಯ ರೈತರು ನಾಲ್ಕನೆ ಅವಧಿಯಲ್ಲಿ ನೋಂದಣಿಗೊಳ್ಳುವ ಸಾಧ್ಯತೆಯಿದೆ. ಆದರೆ ಈಗ ಅಳವಡಿಸಿಕೊಳ್ಳಲಾದ ವಿಧಾನವು ಮುಂದುವರಿದಲ್ಲಿ 4.12 ಕೋಟಿಗೂ ಮೀರಿದ ರೈತ ಕುಟುಂಬಗಳಿಗೆ 2020ರ ಮಾರ್ಚ್ ಕೊನೆಯೊಳಗೆ ನಾಲ್ಕನೇ ಕಂತಿನ ಹಣ ದೊರೆಯಲಾರದು.
ಮೊದಲನೇ ಅವಧಿಯಲ್ಲಿ (ಡಿಸೆಂಬರ್ 2018ರಿಂದ ಮಾರ್ಚ್ 2019ರವರೆಗೆ) ಕೇವಲ 39 ಲಕ್ಷ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಕ್ಕೆ ಹೋಲಿಸಿದರೆ, ಎರಡನೇ ಅವಧಿಯಲ್ಲಿ ( ಎಪ್ರಿಲ್ 2019ರಿಂದ ಜುಲೈ 2019ರವರೆಗೆ) 2.57 ಕೋಟಿ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.

ಆವಾಗಿನಿಂದ ಕೇವಲ 39 ಲಕ್ಷ ರೈತರು ಮೂರನೇ ಅವಧಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ (ಆಗಸ್ಟ್‌ನಿಂದ ನವೆಂಬರ್ 2019). ಆದರೆ ಈ ಸಂಖ್ಯೆಯು ಮೊದಲನೇ ಅವಧಿಯಲ್ಲಿ ನೋಂದಾಯಿಸಿಕೊಂಡಿದ್ದ ರೈತರ ಸಂಖ್ಯೆಯನ್ನು ಮೀರುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಒಟ್ಟಾರೆಯಾಗಿ ಕೇವಲ 7.17 ಕೋಟಿ ರೈತರಷ್ಟೇ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ನೋಂದಾವಣೆಗೊಂಡು, 2 ಸಾವಿರ ರೂ.ಗಳ ಕನಿಷ್ಠ ಒಂದು ಕಂತು ವರ್ಗಾಯಿಸಲ್ಪಟ್ಟಿದೆ.
 ಈ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ವಿವೇಕ್ ಅಗರ್ವಾಲ್ ಅವರು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅಂತಿಮವಾಗಿ 10 ಕೋಟಿ ರೈತರು ನೋಂದಣಿಯಾಗಿದ್ದಾರೆಂದು ಈ ಯೋಜನೆಯ ಸಿಇಒ ವಿವೇಕ್ ಅಗರ್ವಾಲ್ ತಿಳಿಸಿದ್ದಾರೆ. ಇದು ಆರಂಭದಲ್ಲಿ ಅಂದಾಜಿಸಿದ್ದಕ್ಕಿಂತ 14.5 ಕೋಟಿಯಷ್ಟು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಒಂದು ವೇಳೆ ಈ ಊಹಾಪೋಹದ ಅಂದಾಜು ಸರಿಯೇ ಆಗಿದ್ದಲ್ಲಿ ಪ್ರಧಾನಮಂತ್ರಿ, 60 ಸಾವಿರ ಕೋಟಿ ರೂ.ಗಳ ಬಜೆಟ್ ಅನುದಾನವು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ನೋಂದಣಿಯಾದ ಎಲ್ಲಾ 10 ಕೋಟಿ ರೈತರಿಗೆ ಮೂರು ಕಂತುಗಳನ್ನು ನೀಡಲು ಸಾಕಾಗುತ್ತದೆ. ಇದು 2019-20ರ ಹಣಕಾಸು ವರ್ಷದಲ್ಲಿ ನೀಡಲಾದ 75 ಸಾವಿರ ಕೋಟಿ ರೂ.ಗಳ ಅನುದಾನಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಇದು 2019-20ರ ಸಾಲಿನಲ್ಲಿ ನೀಡಲಾದ 75 ಸಾವಿರ ಕೋಟಿ ರೂ.ಗಳ ಅನುದಾನಕ್ಕಿಂತ ತೀರಾ ಕಡಿಮೆಯಾಗಿದೆ. ಈ ಯೋಜನೆಯನ್ನು ಎಲ್ಲಾ ರೈತರಿಗೆ ವಿಸ್ತರಿಸಿದಾಗ ಸುಮಾರು 87 ಸಾವಿರ ಕೋಟಿ ರೂ.ಗಳ ಅನುದಾನದ ಅಗತ್ಯವಿರುವುದಾಗಿ ಅಂದಾಜಿಸಲಾಗಿತ್ತು.

ನಮಗೆ ದೊರೆತಿರುವ ರೈತರ ದತ್ತಾಂಶದ ಸಂಖ್ಯೆಯು ಮೂಲ ಅಂದಾಜಿಗಿಂತ ಕಡಿಮೆಯಾಗಿದೆ. ಅರ್ಹ ರೈತರ ಸಂಖ್ಯೆಯು ಕಡಿಮೆಯಿದ್ದಲ್ಲಿ, ಒಟ್ಟು ವೆಚ್ಚ ಕೂಡಾ ಇಳಿಕೆಯಾಗಲಿದೆ’’ ಎಂದು ಅಗರ್ವಾಲ್ ತಿಳಿಸಿದ್ದಾರೆ.
ಅಂತಿಮವಾಗಿ, ಪ್ರಧಾನಮಂತ್ರಿ ಕಿಸಾನ್ ಯೋಜನೆಯು ದೇಶದ ಎಲ್ಲಾ ರೈತರಿಗೆ ಆರ್ಥಿಕ ಬೆಂಬಲವನ್ನು ಒದಗಿಸುವ ತನ್ನ ಉದ್ದೇಶವನ್ನು ಸಾಧಿಸುವಲ್ಲಿ ಹಿಂದೆ ಬಿದ್ದಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಕೃಪೆ: the wire

Writer - ಕಬೀರ್ ಅಗರ್ವಾಲ್

contributor

Editor - ಕಬೀರ್ ಅಗರ್ವಾಲ್

contributor

Similar News