ಕಳೆದ ವರ್ಷ ಜಾಗತಿಕ ಅತಿ ಸಿರಿವಂತರ ಸಂಪತ್ತಿನಲ್ಲಿ ಇಳಿಕೆ

Update: 2019-11-08 17:28 GMT

ಝೂರಿಕ್ (ಸ್ವಿಟ್ಸರ್‌ಲ್ಯಾಂಡ್), ನ. 8: ಜಗತ್ತಿನ ಅತ್ಯಂತ ಸಿರಿವಂತ ಜನರು ದಶಕದ ಅವಧಿಯಲ್ಲೇ ಮೊದಲ ಬಾರಿಗೆ ಕಳೆದ ವರ್ಷ ತಮ್ಮ ಅಗಾಧ ಸಂಪತ್ತಿನ ಸ್ವಲ್ಪ ಭಾಗವನ್ನು ಕಳೆದುಕೊಂಡಿದ್ದಾರೆ ಎಂದು ಯುಬಿಎಸ್ ಮತ್ತು ಪಿಡಬ್ಲುಸಿನ ವರದಿಯೊಂದು ತಿಳಿಸಿದೆ.

ಜಾಗತಿಕ ರಾಜಕೀಯ ತಳಮಳ ಮತ್ತು ಅಸ್ಥಿರ ಆರ್ಥಿಕ ಮಾರುಕಟ್ಟೆಗಳು ಇದಕ್ಕೆ ಕಾರಣ ಎಂದು ಅದು ಹೇಳಿದೆ.

ಜಾಗತಿಕ ಮಟ್ಟದಲ್ಲಿ ಬಿಲಿಯನೇರ್‌ಗಳ ಸಂಪತ್ತಿನಲ್ಲಿ 388 ಬಿಲಿಯ ಡಾಲರ್ (27.66 ಲಕ್ಷ ಕೋಟಿ ರೂಪಾಯಿ) ಕುಸಿತವಾಗಿದ್ದು, 8.539 ಟ್ರಿಲಿಯ ಡಾಲರ್ (ಸುಮಾರು 610 ಲಕ್ಷ ಕೋಟಿ ರೂಪಾಯಿ)ಗೆ ಇಳಿದಿದೆ.

ಹೆಚ್ಚಿನ ಕುಸಿತವು ಗ್ರೇಟರ್ ಚೀನಾ ಪ್ರದೇಶದಲ್ಲಿ ಸಂಭವಿಸಿದೆ. ಇಲ್ಲಿ ಅಮೆರಿಕ ಮತ್ತು ಏಶ್ಯ ಪೆಸಿಫಿಕ್ ವಲಯದ ಬಳಿಕ ಎರಡನೇ ಅತಿ ಹೆಚ್ಚು ಸಂಖ್ಯೆಯ ಅತಿ ಶ್ರೀಮಂತರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News