8 ತಿಂಗಳ ಬಳಿಕ ಪೃಥ್ವಿ ಶಾ ವಾಪಸ್?

Update: 2019-11-08 18:57 GMT

ಲಂಡನ್,ನ.8: ಉದ್ದೀಪನಾ ಮದ್ದು ಸೇವನೆಗೆ ಸಂಬಂಧಿಸಿದ ನಿಯಮವನ್ನು ಉಲ್ಲಂಘಿಸಿರುವ ಕಾರಣಕ್ಕೆ 8 ತಿಂಗಳ ಕಾಲ ಅಮಾನತುಗೊಂಡಿದ್ದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಮುಂಬೈ ಕ್ರಿಕೆಟ್ ತಂಡಕ್ಕೆ ವಾಪಸಾಗುವ ಸಾಧ್ಯತೆಯಿದೆ. ಶಾ ಆಡಲು ಅರ್ಹತೆ ಪಡೆಯುವ ಮೊದಲು ಮುಂಬೈ 7 ಗ್ರೂಪ್ ಪಂದ್ಯಗಳ ಪೈಕಿ 6 ಪಂದ್ಯವನ್ನು ಆಡಲಿದೆ. ಕೆಮ್ಮದ ಔಷಧಿ ಸೇವನೆಯ ವೇಳೆ ನಿಷೇಧಿತ ರಾಸಾಯನಿಕ ಅಂಶ ಶಾ ಅವರ ದೇಹದೊಳಗೆ ಪ್ರವೇಶಿಸಿತ್ತು. ನಿಷೇಧಿತ ದ್ರವ್ಯವು ಕೆಮ್ಮದ ಔಷಧಿಯಲ್ಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಡೋಪಿಂಗ್ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ಅವರನ್ನು ಬಿಸಿಸಿಐ ಈ ವರ್ಷದ ಜುಲೈನಲ್ಲಿ ಅಮಾನತುಗೊಳಿಸಿತ್ತು. ಶಾ ವಿರುದ್ಧದ 8 ತಿಂಗಳ ಅಮಾನತಿನ ಅವಧಿಯು ಮಾ.16ರಿಂದ ಆರಂಭವಾಗಿದ್ದು, ಈ ವರ್ಷದ ನ.15ರಂದು ಕೊನೆಯಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News