ತೀರ್ಪಿನ ದಿನ ಏಕಾಂಗಿಯಾದ ರಾಮ ಮಂದಿರ ಅಭಿಯಾನದ ರೂವಾರಿ

Update: 2019-11-09 17:35 GMT

ಹೊಸದಿಲ್ಲಿ, ನ.9: ಅಯೋಧ್ಯೆ-ಬಾಬರಿ ಮಸೀದಿ ವಿವಾದದ ತೀರ್ಪು ಇಂದು ಹೊರಬಿದ್ದಿದ್ದು, ರಾಮ ಜನ್ಮಭೂಮಿ ಚಳವಳಿಯ ಶಿಲ್ಪಿ ಎಲ್.ಕೆ. ಅಡ್ವಾಣಿಯವರ ಬಗ್ಗೆ ಯಾವ ನಾಯಕರೂ ಯಾವ ಹೇಳಿಕೆಯನ್ನೂ ನೀಡಿಲ್ಲ ಮತ್ತು ಅವರತ್ತ ಗಮನಹರಿಸಿಲ್ಲ. ದಿಲ್ಲಿಯ ಪೃಥ್ವಿರಾಜ್ ರಸ್ತೆಯಲ್ಲಿರುವ ಅವರ ಮನೆ ಇಡೀ ದಿನ ಮೌನವಾಗಿತ್ತು.

ಇಡೀ ದಿನ ಬಿಜೆಪಿ ನಾಯಕಿ ಉಮಾ ಭಾರತಿಯೊಬ್ಬರೇ ಅಡ್ವಾಣಿ ಮನೆಗೆ ಭೇಟಿ ನೀಡಿದರು. ಅಡ್ವಾಣಿ ಮನೆಯ ಹೊರಗೂ ಯಾವುದೇ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಲ್ಲ. ಮನೆಯ ಮುಂಭಾಗ ಯಾವುದೇ ಸಂಭ್ರಮಾಚರಣೆಗಳೂ ನಡೆದಿಲ್ಲ ಎಂದು theprint.in ವರದಿ ತಿಳಿಸಿದೆ.

ನಿನ್ನೆಯಷ್ಟೇ 92ನೆ ಹುಟ್ಟುಹಬ್ಬ ಆಚರಿಸಿದ್ದ ಅಡ್ವಾಣಿಯವರ ಮನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದರು.

ಶನಿವಾರ ಮನೆಗೆ ಯಾರೂ ಭೇಟಿ ನೀಡುವ ಸಾಧ್ಯತೆಯಿಲ್ಲ ಎಂದು ಅಡ್ವಾಣಿಯವರ ಖಾಸಗಿ ಕಾರ್ಯದರ್ಶಿ ದೀಪಕ್ ಚೋಪ್ರಾ theprint.inಗೆ ಮಾಹಿತಿ ನೀಡಿದ್ದು, ಅಡ್ವಾಣಿಯವರೂ ಮನೆಯಿಂದ ಹೊರಗೆ ತೆರಳುವುದಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News