ಆಸ್ಟ್ರೇಲಿಯ: ಹೆಚ್ಚಿನ ಪ್ರದೇಶಗಳಿಗೆ ಹಬ್ಬುತ್ತಿರುವ ಕಾಡ್ಗಿಚ್ಚು

Update: 2019-11-10 17:27 GMT

ಮೆಲ್ಬರ್ನ್, ನ. 10: ವೇಗವಾಗಿ ಹಬ್ಬುತ್ತಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಆಸ್ಟ್ರೇಲಿಯದ ಅಗ್ನಿಶಾಮಕ ಸಿಬ್ಬಂದಿ ರವಿವಾರ ತೀವ್ರ ಪರಿಶ್ರಮ ಪಟ್ಟಿದ್ದಾರೆ. ದೇಶದ ಅತಿ ದೊಡ್ಡ ನಗರ ಸಿಡ್ನಿ ಸೇರಿದಂತೆ ಇನ್ನೂ ಹಲವಾರು ಪ್ರದೇಶಗಳು ಕಾಡ್ಗಿಚ್ಚಿನ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಆಸ್ಟ್ರೇಲಿಯದಲ್ಲಿ ಕಾಡ್ಗಿಚ್ಚಿನಿಂದಾಗಿ ಮೂವರು ಮೃತಪಟ್ಟಿದ್ದಾರೆ.

ಮಂಗಳವಾರದ ವೇಳೆಗೆ ಗ್ರೇಟರ್ ಸಿಡ್ನಿ ವಲಯದಲ್ಲಿ ಕಾಡ್ಗಿಚ್ಚು ಹರಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

‘‘ಅಧಿಕ ಉಷ್ಣತೆ, ಬಲವಾದ ಗಾಳಿ ಮತ್ತು ಕಡಿಮೆ ತೇವಾಂಶ ಇರುವ ಸಾಧ್ಯತೆಯ ಎಚ್ಚರಿಕೆಯನ್ನು ಹವಾಮಾನ ಮುನ್ಸೂಚನೆ ನೀಡಿದೆ. ಹಾಗಾಗಿ, ಪರಿಸ್ಥಿತಿ ಗಂಭೀರವಾಗಿರುತ್ತದೆ’’ ಎಂದು ನ್ಯೂ ಸೌತ್ ವೇಲ್ಸ್ ರಾಜ್ಯದ ಗ್ರಾಮೀಣ ಅಗ್ನಿಶಾಮಕ ಸೇವೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News