5,300 ಕೋಟಿ ಬ್ಯಾರಲ್ ತೈಲ ನಿಕ್ಷೇಪ ಪತ್ತೆ: ಇರಾನ್ ಅಧ್ಯಕ್ಷ ರೂಹಾನಿ ಘೋಷಣೆ

Update: 2019-11-10 17:33 GMT

ಟೆಹರಾನ್ (ಇರಾನ್), ನ. 10: ಇರಾನ್ ನೂತನ ತೈಲ ನಿಕ್ಷೇಪವೊಂದನ್ನು ಪತ್ತೆಹಚ್ಚಿದೆ ಹಾಗೂ ನೂತನ ನಿಕ್ಷೇಪದಲ್ಲಿ 5300 ಕೋಟಿ ಬ್ಯಾರೆಲ್ ಕಚ್ಚಾತೈಲವಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ರವಿವಾರ ಹೇಳಿದ್ದಾರೆ.

ನೂತನ ಸಂಶೋಧನೆಯು ಇರಾನ್‌ನ ತೈಲ ನಿಕ್ಷೇಪವನ್ನು ಮೂರನೇ ಒಂದರಷ್ಟು ಹೆಚ್ಚಿಸಿದೆ.

ನೂತನ ನಿಕ್ಷೇಪವು ಇರಾನ್‌ನ ಖುಝಿಸ್ತಾನ್ ಪ್ರಾಂತದಲ್ಲಿ 2,400 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ ಎಂದು ಸರಕಾರಿ ಟಿವಿಯಲ್ಲಿ ಮಾಡಿದ ಭಾಷಣದಲ್ಲಿ ರೂಹಾನಿ ಹೇಳಿದರು.

‘‘ಇದು ಜನರಿಗೆ ಸರಕಾರ ನೀಡುತ್ತಿರುವ ಒಂದು ಸಣ್ಣ ಉಡುಗೊರೆಯಾಗಿದೆ’’ ಎಂದರು.

ನೂತನ ನಿಕ್ಷೇಪವು ಇರಾನ್‌ನ ಒಟ್ಟು ನಿಕ್ಷೇಪಕ್ಕೆ 34 ಶೇಕಡದಷ್ಟು ತೈಲವನ್ನು ಹೆಚ್ಚುವರಿಯಾಗಿ ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News