ಯುರೇನಿಯಂ ಸಂವರ್ಧನೆ 5 ಶೇಕಡಕ್ಕೆ ಏರಿಕೆ: ಇರಾನ್

Update: 2019-11-10 17:51 GMT

ಟೆಹರಾನ್, ನ. 10: ಜಾಗತಿಕ ಶಕ್ತ ರಾಷ್ಟ್ರಗಳೊಂದಿಗೆ 2015ರಲ್ಲಿ ಮಾಡಿಕೊಂಡ ಪರಮಾಣು ಒಪ್ಪಂದದಿಂದ ಒಂದೊಂದೇ ಹೆಜ್ಜೆ ಹಿಂದೆ ಬರುತ್ತಿರುವ ಇರಾನ್, ತಾನೀಗ ಯುರೇನಿಯಂ ಸಂವರ್ಧನೆಯ ಮಟ್ಟವನ್ನು 5 ಶೇಕಡಕ್ಕೆ ಏರಿಸಿರುವುದಾಗಿ ಹೇಳಿದೆ.

ಪರಮಾಣು ಒಪ್ಪಂದವು ಇರಾನ್‌ನ ಯುರೇನಿಯಂ ಸಂವರ್ಧನೆಯನ್ನು 3.67 ಶೇಕಡಕ್ಕೆ ಸೀಮಿತಗೊಳಿಸಿದೆ. ಆದರೆ, ಅಮೆರಿಕವು ಕಳೆದ ವರ್ಷ ಏಕಪಕ್ಷೀಯವಾಗಿ ಒಪ್ಪಂದದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ತಾನು ಕೂಡ ಇನ್ನು ಒಪ್ಪಂದವನ್ನು ಗೌರವಿಸುವುದಿಲ್ಲ ಎಂದು ಇರಾನ್ ಹೇಳಿದೆ.

ಕಳೆದ ವರ್ಷದ ಮೇ ತಿಂಗಳಲ್ಲಿ ಅಮೆರಿಕವು ಒಪ್ಪಂದದಿಂದ ಹಿಂದೆ ಸರಿದ ಬಳಿಕ, ಇರಾನ್ ವಿರುದ್ಧ ತೀವ್ರ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿತ್ತು.

‘‘ನಮ್ಮ ಅಗತ್ಯಕ್ಕೆ ಅನುಸಾರವಾಗಿ ಹಾಗೂ ನಮಗೆ ನೀಡಲಾದ ಆದೇಶದಂತೆ, ಪ್ರಸಕ್ತ ನಾವು 5 ಶೇಕಡ ಯುರೇನಿಯಂ ಸಂವರ್ಧನೆಯನ್ನು ಮಾಡುತ್ತಿದ್ದೇವೆ’’ ಎಂದು ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯ ವಕ್ತಾರ ಬೆಹ್ರೂಝ್ ಕಮಲ್ವಾಂಡಿ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News