ಪ್ಯಾರಿಸ್: ಇಸ್ಲಾಮೊಫೋಬಿಯ ವಿರುದ್ಧ ಬೃಹತ್ ಮೆರವಣಿಗೆ

Update: 2019-11-11 16:57 GMT
ಫೋಟೊ: GEOFFROY VAN DER HASSELT / AFP

ಪ್ಯಾರಿಸ್, ನ. 11: ಉತ್ತರ ಪ್ಯಾರಿಸ್‌ನಲ್ಲಿ ರವಿವಾರ ನಡೆದ ‘ಇಸ್ಲಾಮೊಫೋಬಿಯ’ದ ವಿರುದ್ಧದ ಅಭಿಯಾನದಲ್ಲಿ 13,500ಕ್ಕೂ ಅಧಿಕ ಜನರು ಭಾಗವಹಿಸಿದರು.

ಫ್ರಾನ್ಸ್‌ನ ದಕ್ಷಿಣದ ನಗರ ಬಾಯೋನ್‌ನಲ್ಲಿರುವ ಮಸೀದಿಯೊಂದರ ಮೇಲೆ ಕಳೆದ ತಿಂಗಳು 84 ವರ್ಷದ ವ್ಯಕ್ತಿಯೊಬ್ಬ ನಡೆಸಿರುವ ಹಿನ್ನೆಲೆಯಲ್ಲಿ ಈ ಅಭಿಯಾನಕ್ಕೆ ಕರೆ ಕೊಡಲಾಗಿತ್ತು. ಕಡು ಬಲಪಂಥೀಯ ಕಾರ್ಯಕರ್ತನಾಗಿದ್ದ ಈ ವ್ಯಕ್ತಿಯು ಮಸೀದಿಯಲ್ಲಿ ಗುಂಡು ಹಾರಿಸಿ ಇಬ್ಬರನ್ನು ಗಾಯಗೊಳಿಸಿದ್ದನು.

ಇಸ್ಲಾಮ್ ವಿರುದ್ಧದ ದಾಳಿಯನ್ನು ಖಂಡಿಸುವ ಘೋಷಣಾಪತ್ರಗಳನ್ನು ಹೆಚ್ಚಿನವರು ಹಿಡಿದುಕೊಂಡಿದ್ದರು. ಹಲವಾರು ಮಹಿಳೆಯರು ಮುಸ್ಲಿಮ್ ಮಹಿಳೆಯರ ಸಾಂಪ್ರದಾಯಿಕ ಬುರ್ಖಾಗಳನ್ನು ಧರಿಸಿದ್ದರು. ಇನ್ನೂ ಹಲವರು ಫ್ರಾನ್ಸ್ ರಾಷ್ಟ್ರಧ್ವಜ ಮಾದರಿಯಲ್ಲಿದ್ದ ಬುರ್ಖಾಗಳನ್ನು ತೊಟ್ಟಿದ್ದರು.

 ದಕ್ಷಿಣದ ನಗರ ಮಾರ್ಸಿಲಿಯಲ್ಲಿಯೂ ರವಿವಾರ ನೂರಾರು ಮಂದಿ ಇದೇ ರೀತಿಯ ಪ್ರದರ್ಶನವನ್ನು ನಡೆಸಿದರು. ‘ಇಸ್ಲಾಮೊಫೋಬಿಯ ಕೊಲ್ಲುತ್ತದೆ’ ಎಂದು ಬರೆಯಲಾದ ಘೋಷಪತ್ರಗಳನ್ನು ಅವರು ಪ್ರದರ್ಶಿಸಿದರು. ‘‘ನಾವೆಲ್ಲರೂ ರಿಪಬ್ಲಿಕ್ (ದೇಶ)ನ ಮಕ್ಕಳು’’ ಎಂಬ ಘೋಷಣೆಗಳನ್ನು ಅವರು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News