ಅಂಗನವಾಡಿ ಮಕ್ಕಳ ಮೇಲೆ ವಿಷ ದ್ರಾವಣ ಸಿಂಪಡನೆ: 50 ಮಂದಿ ಅಸ್ವಸ್ಥ

Update: 2019-11-12 17:50 GMT
ಫೋಟೊ: independent.co.uk

 ಬೀಜಿಂಗ್, ನ. 12: ನೈರುತ್ಯ ಚೀನಾದ ಅಂಗನವಾಡಿಯೊಂದಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಅಲ್ಲಿದ್ದವರ ಮೇಲೆ ವಿಷಕಾರಿ ದ್ರಾವಣವೊಂದನ್ನು ಸಿಂಪಡಿಸಿದಾಗ 50ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡವರಲ್ಲಿ ಮಕ್ಕಳೇ ಹೆಚ್ಚಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಸೋಮವಾರ 23 ವರ್ಷದ ದುಷ್ಕರ್ಮಿಯು ಗೋಡೆ ಹಾರಿ ಅಂಗನವಾಡಿ ಪ್ರವೇಶಿಸಿ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣವನ್ನು ಸಿಂಪಡಿಸಿದನು. ಬಳಿಕ ಪೊಲೀಸರು ಅವನನ್ನು ಬಂಧಿಸಿದರು.

ಸುಮಾರು 51 ಮಕ್ಕಳು ಮತ್ತು ಮೂವರು ಶಿಕ್ಷಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇಬ್ಬರು ವಿಷ ದ್ರಾವಣದ ‘ತೀವ್ರ ಲಕ್ಷಣ’ಗಳನ್ನು ತೋರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News