ಉತ್ತರ ಪ್ರದೇಶ ಪೊಲೀಸರ 'ಲಾಠಿ ಸವಾರಿ' ನೋಡಿದ್ದೀರಾ?

Update: 2019-11-13 12:51 GMT

ಲಕ್ನೋ, ನ.13: ಕವಾಯತು ಭಾಗವಾಗಿ ಉತ್ತರ ಪ್ರದೇಶದ ಪೊಲೀಸರು ತಮ್ಮ ಲಾಠಿಗಳನ್ನು ತಮ್ಮ ಕಾಲುಗಳೆಡೆ ಇರಿಸಿ  ಕುದುರೆಗಳಂತೆ ನೆಗೆಯುತ್ತಾ ಓಡುವ ವೀಡಿಯೋವೊಂದು ವೈರಲ್ ಆಗಿದೆ.

ಇದು ನವೆಂಬರ್ 8ರಂದು ಫಿರೋಝಾಬಾದ್ ಜಿಲ್ಲೆಯಲ್ಲಿ ನಡೆದ ಅಣಕು ಡ್ರಿಲ್ ನ ವೀಡಿಯೋ ಕ್ಲಿಪ್ ಎನ್ನಲಾಗಿದೆ.

ಈ ರೀತಿಯ ಡ್ರಿಲ್ ನಡೆಸಿದ್ದನ್ನು ಇನ್‍ಸ್ಪೆಕ್ಟರ್ ರಾಮ್ ಇಕ್ಶಾ ಸಮರ್ಥಿಸಿಕೊಂಡಿದ್ದಾರೆ. "ಜನರ ಗುಂಪನ್ನು ನಿಭಾಯಿಸುವುದು ಹೇಗೆಂದು ಪೊಲೀಸರಿಗೆ ತರಬೇತಿ ನೀಡಲಾಗಿತ್ತು. ನಮ್ಮಲ್ಲಿ ಕುದುರೆಗಳಿಲ್ಲದೇ ಇದ್ದುದರಿಂದ ಕುದುರೆಯನ್ನೇರಿ ಕುಳಿತಂತೆ ಭಾವಿಸಲು ಹೇಳಿ ಪೊಲೀಸರಿಗೆ ಓಡಲು ಹೇಳಲಾಗಿತ್ತು'' ಎಂದು ಅವರು ಹೇಳಿದ್ದಾರೆ.

ವೀಡಿಯೋ ವೈರಲ್ ಆದ ನಂತರ ಈ ಕುರಿತಂತೆ ಫಿರೋಝಾಬಾದ್ ಪೊಲೀಸರೂ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿ ತಮ್ಮಲ್ಲಿ ನಿಜವಾದ ಕುದುರೆಗಳಿಲ್ಲದೇ ಇದ್ದುದರಿಂದ ಈ ರೀತಿ ಮಾಡಬೇಕಾಯಿತು ಎಂದಿದ್ದಾರೆ.

``ಗಲಭೆ ನಿಯಂತ್ರಣ ಡ್ರಿಲ್ ಸಂದರ್ಭ  ಪೊಲೀಸ್ ತಂಡಗಳು  ಗಲಭೆಕೋರರನ್ನು ನಿಯಂತ್ರಿಸಬೇಕಿದೆ. ಮೂರನೇ ಪೊಲೀಸ್ ತಂಡ ಕುದುರೆಯನ್ನೇರಿ ಬರಬೇಕಾಗುತ್ತದೆ. ಆದುದರಿಂದ ಸಾಂಕೇತಿಕವಾಗಿ ಕಾನ್‍ ಸ್ಟೇಬಲ್‍ಗಳು ಈ ರೀತಿ ಮಾಡಿದ್ದಾರೆ,'' ಎಂದೂ ಟ್ವೀಟ್ ಮೂಲಕ ಸಮಜಾಯಿಷಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News