ಟ್ರಂಪ್‌ರ ವಿಪರೀತದ ಹೇಳಿಕೆಗಳಿಂದ ಪರಿಸರ ಚಳವಳಿಗೆ ಸಹಾಯ

Update: 2019-11-13 17:35 GMT

 ಹ್ಯಾಂಪ್ಟನ್ (ಅಮೆರಿಕ), ನ. 13: ಹವಾಮಾನ ಬದಲಾವಣೆ ಎನ್ನುವುದು ಸುಳ್ಳು ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಷ್ಟು ಪ್ರಬಲವಾಗಿ ವಾದಿಸುತ್ತಿದ್ದಾರೆಂದರೆ, ಅದರಿಂದ ದೀರ್ಘ ಕಾಲೀನ ಜಾಗತಿಕ ತಾಪಮಾನವನ್ನು ಎದುರಿಸುವ ಚಳವಳಿಗೆ ಚೈತನ್ಯ ತುಂಬಲು ಸಾಧ್ಯವಾಗಿದೆ ಎಂದು ಸ್ವೀಡನ್‌ನ ಹದಿಹರಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ಮಂಗಳವಾರ ಹೇಳಿದ್ದಾರೆ.

ಸುಮಾರು ಮೂರು ತಿಂಗಳುಗಳನ್ನು ಕಳೆದು, ಉತ್ತರ ಅಮೆರಿಕದಿಂದ ನಿರ್ಗಮಿಸುವ ಮುನ್ನಾ ದಿನ ಎಎಫ್‌ಪಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

‘‘ಅವರು ಅತ್ಯಂತ ತೀವ್ರ ಅಭಿಪ್ರಾಯಗಳನ್ನು ಹೊಂದಿದ್ದಾರೆ ಹಾಗೂ ವಿಪರೀತದ ಮಾತುಗಳನ್ನು ಆಡುತ್ತಾರೆ. ಹಾಗಾಗಿ, ಜನರು ಇದರಿಂದ ಎಚ್ಚರಗೊಳ್ಳುತ್ತಾರೆ ಎಂದು ನನಗನಿಸುತ್ತದೆ’’ ಎಂದು 16 ವರ್ಷದ ಪರಿಸರ ಕಾರ್ಯಕರ್ತೆ ಹಾಯಿದೋಣಿಯೊಂದರಲ್ಲಿ ಕುಳಿತು ಹೇಳಿದರು. ಅವರು ಇದೇ ಹಾಯಿದೋಣಿ ಮೂಲಕ ಅಮೆರಿಕದ ಪೂರ್ವ ಕರಾವಳಿಯ ಪಟ್ಟಣ ಹ್ಯಾಂಪ್ಟನ್‌ನಿಂದ ಯುರೋಪ್‌ಗೆ ಬುಧವಾರ ಮುಂಜಾನೆ ಪ್ರಯಾಣಿಸಿದ್ದಾರೆ.

‘‘ಈಗಿನ ರೀತಿಯಲ್ಲಿಯೇ ನಾವು ಮುಂದುವರಿದರೆ, ಏನೂ ಆಗುವುದಿಲ್ಲ ಎಂದು ನನಗನಿಸುತ್ತದೆ. ಹಾಗಾಗಿ, ಬಹುಷಃ ಎಚ್ಚೆತ್ತುಕೊಳ್ಳಲು ಅವರು (ಟ್ರಂಪ್) ತನ್ನ ವಿಚಿತ್ರ ಹೇಳಿಕೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News