ವಿಮಾನ ನಿಲ್ದಾಣದಲ್ಲಿ 25 ಹೊಸ ಫೋನ್ ಗಳನ್ನು ಕದ್ದ ಸಿಬ್ಬಂದಿ

Update: 2019-11-13 17:40 GMT
ಫೋಟೋ: khaleejtimes.com

ದುಬೈ, ನ. 13: ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಕಂಪೆನಿಯೊಂದರ ಉದ್ಯೋಗಿಯೋರ್ವ ಹೊಸ ಮೊಬೈಲ್ ಫೋನ್‌ಗಳ ಪ್ಯಾಕೇಜ್‌ನಿಂದ 25 ಫೋನ್‌ಗಳನ್ನು ಕದ್ದು ಅವುಗಳ ಜಾಗದಲ್ಲಿ ಹಳೆಯ ಫೋನ್‌ಗಳನ್ನು ಇಟ್ಟಿದ್ದಾನೆ ಎಂದು ಆರೊಪಿಸಲಾಗಿದೆ.

ದುಬೈಯ ನ್ಯಾಯಾಲಯವೊಂದು ಪ್ರಕರಣದ ವಿಚಾರಣೆ ನಡೆಸುತ್ತಿದೆ.

ದುಬೈ ವಿಮಾನ ನಿಲ್ದಾಣಕ್ಕೆ ಚೀನಾದಿಂದ ಬಂದ ಫೋನ್‌ಗಳನ್ನು ಖಾಸಗಿ ಕಂಪೆನಿಯೊಂದು ಕುವೈತ್‌ನ ವ್ಯಕ್ತಿಯೊಬ್ಬರಿಗೆ ತಲುಪಿಸಬೇಕಾಗಿತ್ತು. ಆ ಕಂಪೆನಿಯಲ್ಲಿ ಕೆಲಸ ಮಾಡುವ ಜೋರ್ಡಾನ್‌ನ ಇನ್ಸ್‌ಪೆಕ್ಟರ್ ಓರ್ವ ಈ ಅವ್ಯವಹಾರ ನಡೆಸಿದ್ದಾನೆ.

ಈ ಘಟನೆ ಜೂನ್ 9ರಂದು ನಡೆದಿದೆ.

 ಜೂನ್ 9ರಂದು ಚೀನಾದಿಂದ 408 ಸ್ಮಾರ್ಟ್‌ಫೋನ್‌ಗಳ ಸರಕು ಬಂದಿತ್ತು. ಅದನ್ನು ಕುವೈತ್‌ಗೆ ಕಳುಹಿಸಿದ ಬಳಿಕ, ಪ್ಯಾಕೇಜ್‌ನಲ್ಲಿದ್ದ 25 ಫೋನ್‌ಗಳು ಹಳೆಯವು ಹಾಗೂ ಹಾಳಾದವು ಎಂಬ ದೂರು ಕುವೈತ್‌ನ ವ್ಯಕ್ತಿಯಿಂದ ಬಂತು.

ಸಿಸಿಟಿವಿ ಪರಿಶೀಲಿಸಿದಾಗ, ಜೋರ್ಡಾನ್‌ನ ಇನ್ಸ್‌ಪೆಕ್ಟರ್ ಫೋನ್‌ಗಳನ್ನು ಕದ್ದು ಹಳೆಯ ಹಾಗೂ ಅದೆ ತೂಕದ ಫೋನ್‌ಗಳನ್ನು ಅಲ್ಲಿ ಇಟ್ಟಿರುವುದು ಗಮನಕ್ಕೆ ಬಂದಿದೆ ಎಂದು ಕಂಪೆನಿಯ ಮ್ಯಾನೇಜರ್ ಹೇಳಿದ್ದಾರೆ.

ದುಬೈ ಮತ್ತು ಕುವೈತ್ ನಡುವಿನ ಫೋನ್ ಸಾಗಾಟದ ವೇಳೆ, ಹಿಂದೆಯೂ ಇದೇ ರೀತಿಯ ಘಟನೆ ನಡೆದಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News