ಇಮ್ರಾನ್ ಮಾಜಿ ಪತ್ನಿಯ ಕ್ಷಮೆ ಕೋರಿದ ಪಾಕ್ ಸುದ್ದಿ ಚಾನೆಲ್

Update: 2019-11-13 18:02 GMT
 ಫೋಟೋ: Imran Khan

ಲಂಡನ್, ನ. 13: ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಸಚಿವರೊಬ್ಬರು ಮಾಡಿದ ‘ಮಾನಹಾನಿಕರ ಆರೋಪ’ಗಳಿಗಾಗಿ ಪಾಕಿಸ್ತಾನದ ಸುದ್ದಿ ಚಾನೆಲೊಂದು ಆ ದೇಶದ ಪ್ರಧಾನಿ ಇಮ್ರಾನ್ ಖಾನ್‌ರ ಮಾಜಿ ಪತ್ನಿ ರೇಶಾಮ್ ಖಾನ್‌ಗೆ ಪರಿಹಾರ ನೀಡಿದೆ ಹಾಗೂ ಕ್ಷಮೆ ಕೋರಿದೆ.

ಲಂಡನ್ ಹೈಕೋರ್ಟ್‌ನಲ್ಲಿ ಸೋಮವಾರ ನಡೆದ ವಿಚಾರಣೆಯ ವೇಳೆ, ಎರಡು ಪಕ್ಷಗಳ ನಡುವೆ ಏರ್ಪಟ್ಟ ಒಡಂಬಡಿಕೆಯ ಬಗ್ಗೆ ನ್ಯಾಯಾಧೀಶರಿಗೆ ಮಾಹಿತಿ ನೀಡಲಾಯಿತು.

2018 ಜೂನ್‌ನಲ್ಲಿ ‘ದುನಿಯಾ ಟಿವಿ’ಯ ‘ಆನ್ ದ ಫ್ರಂಟ್ ವಿದ್ ಕಮ್ರಾನ್ ಶಾಹಿದ್’ ಎಂಬ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ನನ್ನ ವಿರುದ್ಧ ಗಂಭೀರ ಹಾಗೂ ಸಂಪೂರ್ಣ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ ಎಂಬುದಾಗಿ ಪಾಕಿಸ್ತಾನ ಮೂಲದ ಬ್ರಿಟಿಶ್ ಪ್ರಜೆಯಾಗಿರುವ ರೇಶಾಮ್ ಆರೋಪಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ಮೊಕದ್ದಮೆಯೊಂದನ್ನೂ ಹೂಡಿದ್ದಾರೆ.

‘‘ಈ ಆರೋಪಗಳಿಗಾಗಿ ದುನಿಯ ಟಿವಿ ಈಗ ಸಂಪೂರ್ಣ ಹಾಗೂ ಸ್ಪಷ್ಟ ಸಾರ್ವಜನಿಕ ಕ್ಷಮೆ ಕೋರಿದೆ’’ ಎಂದು ರೇಶಾಮ್‌ರ ವಕೀಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News