ಆಸ್ಟ್ರೇಲಿಯದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲು ಪಾಕ್‌ನ 16ರ ಹರೆಯದ ಬೌಲರ್ ನಸೀಂ ಶಾ ಸಜ್ಜು

Update: 2019-11-14 02:07 GMT

ಹೊಸದಿಲ್ಲಿ, ನ.13: ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ಆಡಿರುವ ಸೀಮಿತ ಓವರ್‌ಗಳ ಸರಣಿಯನ್ನು ಸೋತಿರುವ ಪಾಕಿಸ್ತಾನ ತಂಡ 3 ಪಂದ್ಯಗಳ ಟ್ವೆಂಟಿ-20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಕ್ಕೆ ತೆರಳಲಿದೆ. ಮುಖ್ಯ ಕೋಚ್ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಮಿಸ್ಬಾವುಲ್ ಹಕ್ 16ರ ಹರೆಯದ ವೇಗದ ಬೌಲರ್ ನಸೀಂ ಶಾ ಅವರನ್ನು ತಂಡಕ್ಕೆ ಪರಿಚಯಿಸಲಿದ್ದಾರೆ. ನ.21ರಿಂದ ಪರ್ತ್‌ನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿರುವ ಪಾಕಿಸ್ತಾನ ತಂಡಕ್ಕೆ ನಸೀಂ ಆಯ್ಕೆಯಾಗಿದ್ದಾರೆ. ಕೇವಲ 5 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 17 ವಿಕೆಟ್‌ಗಳನ್ನು ಪಡೆದಿರುವ ಶಾ ಈ ತನಕ ಶಾಲಾ ಮಟ್ಟದ ಟೂರ್ನಿಗಳಲ್ಲಿ ಆಡಿದ್ದರು. ವೇಗವಾಗಿ ಬೌಲಿಂಗ್ ಮಾಡಬಲ್ಲ ಶಾ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಸೆಪ್ಟಂಬರ್‌ನಲ್ಲಿ ಲಾಹೋರ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟಿದ್ದರು.

 ಗಲ್ಲಿ ಕ್ರಿಕೆಟ್ ಆಡುವುದರಿಂದ ವೃತ್ತಿಜೀವನ ಆರಂಭಿಸಿದ ಶಾ ಅಂಡರ್-16 ರೀಜನಲ್ ಟ್ರಯಲ್ಸ್‌ನಲ್ಲಿ 8 ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಉರುಳಿಸಿದ್ದರು. ಈ ಮೂಲಕ ಪಾಕಿಸ್ತಾನ ಅಂಡರ್-16 ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದರು. ಏಶ್ಯಾ ಕಪ್ ಅಂಡರ್-19 ತಂಡದಲ್ಲಿ ಆಡಿದ್ದ ಶಾ ಪ್ರಥಮ ದರ್ಜೆ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳನ್ನು ಉರುಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News