​ಮೊದಲ ಟೆಸ್ಟ್: ಭಾರತಕ್ಕೆ ಮೊದಲ ದಿನದ ಗೌರವ

Update: 2019-11-14 13:42 GMT
ಚೇತೇಶ್ವರ್ ಪೂಜಾರ

 ಇಂದೋರ‍್, ನ.14: ಇಲ್ಲಿ ಆರಂಭಗೊಂಡ ಟೆಸ್ಟ್ ಚಾಂಪಿಯನ್‌ಶಿಪ್‌ನ ಪ್ರಥಮ ಟೆಸ್ಟ್‌ನ ಮೊದಲ ದಿನ ಪ್ರವಾಸಿ ಬಾಂಗ್ಲಾದೇಶ ತಂಡವನ್ನು ಪ್ರಥಮ ಇನಿಂಗ್ಸ್ ನಲ್ಲಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿರುವ ಭಾರತ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 26 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 86 ರನ್ ಗಳಿಸಿದೆ.

ಮೊದಲ ದಿನದ ಆಟ ಕೊನೆಗೊಂಡಾಗ 37 ರನ್ ಗಳಿಸಿರುವ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಮತ್ತು 43 ರನ್ ಗಳಿಸಿರುವ ಚೇತೇಶ್ವರ್ ಪೂಜಾರ ಔಟಾಗದೆ ಕ್ರೀಸ್‌ನಲ್ಲಿದ್ದರು. ರೋಹಿತ್ ಶರ್ಮಾ 6 ರನ್ ಗಳಿಸಿ ಔಟಾಗಿದ್ದಾರೆ.

ಬಾಂಗ್ಲಾ 150ಕ್ಕೆ ಆಲೌಟ್: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡ ಭಾರತದ ಬೌಲರ್‌ಗಳ ಸಂಘಟಿತ ದಾಳಿಗೆ ಸಿಲುಕಿ 58.3 ಓವರ್‌ಗಳಲ್ಲಿ 150 ರನ್‌ಗಳಿಗೆ ಆಲೌಟಾಗಿದೆ.

ಮುಹಮ್ಮದ್ ಶಮಿ(27ಕ್ಕೆ 3), ಇಶಾಂತ್ ಶರ್ಮಾ (20ಕ್ಕೆ 2), ಉಮೇಶ್ ಯಾದವ್(47ಕ್ಕೆ 2), ರವಿಚಂದ್ರನ್ ಅಶ್ವಿನ್(43ಕ್ಕೆ 2) ದಾಳಿಗೆ ಸಿಲುಕಿದ ಬಾಂಗ್ಲಾ ತಂಡದ ಪರ ಯಾರಿಗೂ ಅರ್ಧಶತಕ ದಾಖಲಿಸಲು ಸಾಧ್ಯವಾಗಲಿಲ್ಲ. ಮುಶ್ಫೀಕುರ್ರಹೀಂ 43 ರನ್ ಗಳಿಸಿರುವುದು ಗರಿಷ್ಠ ವೈಯಕ್ತಿಕ ಕೊಡುಗೆ.

ನಾಯಕ ಮೊಮಿನುಲ್ ಹಕ್(37), ಮುಹಮ್ಮದ್ ಮಿಥುನ್(13), ಮಹಮ್ಮುದುಲ್ಲಾ(10) ಮತ್ತು ವಿಕೆಟ್ ಕೀಪರ್ ಲಿಟನ್ ದಾಸ್ (21) ಎರಡಂಕೆಯ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News