ಬಿಜೆಪಿ-ಶಿವಸೇನೆ ವಿವಾದದ ನಡುವೆ ಬಿಎಂಸಿ ಗುತ್ತಿಗೆದಾರರ ಮೇಲೆ ಐಟಿ ದಾಳಿ

Update: 2019-11-14 18:40 GMT

ಮುಂಬೈ,ನ.14: ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯ ಸಿವಿಲ್ ಗುತ್ತಿಗೆದಾರರ ವಿರುದ್ಧ ಆದಾಯ ತೆರಿಗೆ ಅಧಿಕಾರಿಗಳು ಸರಣಿ ದಾಳಿಗಳನ್ನು ನಡೆಸಿದ್ದು,ಒಟ್ಟು 735 ಕೋ.ರೂ.ಗಳ ಅವ್ಯವಹಾರಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ನ.6ರಂದು ಒಟ್ಟು 30 ಕಡೆಗಳಲ್ಲಿ ದಾಳಿಗಳನ್ನು ನಡೆಸಲಾಗಿದ್ದು,ಇತರ ಏಳು ಗುತ್ತಿಗೆದಾರರ ವ್ಯವಹಾರಗಳನ್ನು ಪರಿಶೀಲಿಸಲಾಗಿದೆ. ಕೆಲವು ಗುತ್ತಿಗೆದಾರರು ಆದಾಯ ತೆರಿಗೆಯನ್ನು ವಂಚಿಸಲು ಲೆಕ್ಕಪತ್ರಗಳಲ್ಲಿ ಗೋಲ್‌ಮಾಲ್ ನಡೆಸಿರುವ ಬಗ್ಗೆ ವರದಿಗಳಿದ್ದವು ಎಂದು ಅಧಿಕಾರಿಯೋರ್ವರು ತಿಳಿಸಿದರು.

ದಾಳಿಗಳ ಸಂದರ್ಭ ಭಾರೀ ಪ್ರಮಾಣದ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವಹಿವಾಟನ್ನು ತೋರಿಸುವ ಆಕ್ಷೇಪಾರ್ಹ ದಾಖಲೆಗಳು ಪತ್ತೆಯಾಗಿವೆ. ಹೆಚ್ಚಿನ ಅವ್ಯವಹಾರಗಳನ್ನು ಮುಖವಾಡ ಕಂಪನಿಗಳ ಮೂಲಕ ನಡೆಸಲಾಗಿತ್ತು ಎಂದರು.

ರಾಜ್ಯದಲ್ಲಿ ರಾಜಕೀಯ ಪ್ರಕ್ಷುಬ್ಧತೆಯ ನಡುವೆಯೇ ಈ ದಾಳಿಗಳು ನಡೆದಿವೆ.ಬಿಎಂಸಿ ಆಡಳಿತವು ಬಿಜೆಪಿಯೊಂದಿಗೆ ಮೈತ್ರಿಯನ್ನು ಕಡಿದುಕೊಂಡಿರುವ ಶಿವಸೇನೆಯ ನಿಯಂತ್ರಣದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News