2020ರ ಐಪಿಎಲ್: ರಾಜಸ್ಥಾನ ರಾಯಲ್ಸ್ ಗೆ ಸ್ಮಿತ್ ಸಾರಥ್ಯ

Update: 2019-11-15 17:48 GMT

ಹೊಸದಿಲ್ಲಿ, ನ.15: ಕಳೆದ ಆವೃತ್ತಿಯ ಐಪಿಎಲ್‌ನ ಮಧ್ಯೆ ಅಜಿಂಕ್ಯ ರಹಾನೆಯಿಂದ ನಾಯಕತ್ವವನ್ನು ವಹಿಸಿಕೊಂಡಿದ್ದ ಸ್ಟೀವ್ ಸ್ಮಿತ್ 2020ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಜಯ ಸಾಧಿಸಿ ಪರದಾಟ ನಡೆಸುತ್ತಿದ್ದ ರಾಜಸ್ಥಾನ ತಂಡ ಸ್ಮಿತ್ ನಾಯಕತ್ವವಹಿಸಿಕೊಂಡ ಬಳಿಕ 4 ಪಂದ್ಯಗಳಲ್ಲಿ ಜಯ ಸಾಧಿಸಿ ಚೇತರಿಸಿಕೊಂಡಿತ್ತು.

ಸ್ಮಿತ್ ಆಯ್ಕೆಯ ಸಂಬಂಧ ಮಾತನಾಡಿದ ರಾಜಸ್ಥಾನದ ಕೋಚ್ ಆ್ಯಂಡ್ರೂ ಮೆಕ್‌ಡೊನಾಲ್ಡ್, ‘‘ಆಸ್ಟ್ರೇಲಿಯದ ಮಾಜಿ ನಾಯಕನ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದು, ಈ ಮೂಲಕ ರಾಜಸ್ಥಾನವನ್ನು ಹೊಸ ಎತ್ತರಕ್ಕೆ ಒಯ್ಯುವೆನು’’ ಎಂದು ಹೇಳಿದರು.

ರಾಜಸ್ಥಾನ ತಂಡ ಈ ಋತುವಿನಲ್ಲಿ ರಹಾನೆಯನ್ನು ತಂಡದಿಂದ ಬಿಡುಗಡೆ ಮಾಡಿದ್ದು, ಭಾರತದ ಆಟಗಾರ ರಹಾನೆ ಮುಂದಿನ ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News