ಶ್ರೀಲಂಕಾ: ಮತದಾರರಿದ್ದ ಬಸ್ ಮೇಲೆ ಬಂದೂಕುದಾರಿಗಳ ದಾಳಿ

Update: 2019-11-16 05:24 GMT

ಕೊಲಂಬೊ, ನ.16: ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯುವ ಕೆಲವೇ ಗಂಟೆಗಳ ಮೊದಲು ಅಲ್ಪ ಸಂಖ್ಯಾತ ಮುಸ್ಲಿಂ ಮತದಾರರನ್ನು ಕರೆದೊಯ್ಯತ್ತಿದ್ದ ಬಸ್‌ಗಳ ಮೇಲೆ ಬಂದೂಕುದಾರಿಗಳು ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಶನಿವಾರ ವಾಯುವ್ಯ ಶ್ರೀಲಂಕಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ಸಾವು-ನೋವಾಗಿರುವ ಕುರಿತು ವರದಿಯಾಗಿಲ್ಲ. ದಾಳಿಕೋರರು ರಸ್ತೆಯಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿದ್ದರು. ದಾಳಿ ಮಾಡುವ ಉದ್ದೇಶದಿಂದ 100ಕ್ಕೂ ಅಧಿಕ ವಾಹನಗಳನ್ನು ಬ್ಲಾಕ್ ಮಾಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‘‘ಬಂದೂಕುದಾರಿಗಳು ಗುಂಡು ಹಾರಾಟ ನಡೆಸಿದ್ದು, ಕಲ್ಲು ತೂರಾಟವನ್ನು ನಡೆಸಿದ್ದಾರೆ. ಘಟನೆಯಿಂದ ಕನಿಷ್ಟ ಎರಡು ಬಸ್‌ಗಳಿಗೆ ಹಾನಿಯಾಗಿದೆ. ಆದರೆ, ಸಾವು-ನೋವಿನ ಕುರಿತಂತೆ ವರದಿಯಾಗಿಲ. ಕರಾವಳಿ ನಗರ ಪುಟ್ಟಲಂನಿಂದ ಮುಸ್ಲಿಂಮರು ನೆರೆ ಜಿಲ್ಲೆ ಮನ್ನಾರ್‌ಗೆ ಮತದಾನ ಮಾಡಲು ತೆರಳುತ್ತಿದ್ದರು. ಮನ್ನಾರ್‌ನಲ್ಲಿ ಇವರಿಗೆ ಮತದಾನ ಮಾಡುವ ಅವಕಾಶ ವಿತ್ತು’’ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News