ಅಸ್ಸಾಂ ಎನ್‌ಆರ್‌ಸಿ: ಮುಸ್ಲಿಮರನ್ನು ದೇಶವಿಲ್ಲದವರಂತೆ ಮಾಡುವ ಸಾಧನ; ಅಮೆರಿಕಾದ ಧಾರ್ಮಿಕ ಸ್ವಾತಂತ್ರ್ಯ ಆಯೋಗ

Update: 2019-11-16 11:10 GMT

ವಾಷಿಂಗ್ಟನ್: ಅಸ್ಸಾಂ ರಾಜ್ಯದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ ಆರ್ ಸಿ) ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಹಾಗೂ ಮುಸ್ಲಿಮರನ್ನು ದೇಶವಿಲ್ಲದವರಂತೆ ಮಾಡುವ ಒಂದು ಸಾಧನವಾಗಿದೆ ಎಂದು ಅಮರಿಕಾದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಹೇಳಿದೆ.

ಅಸ್ಸಾಂನ ಬಂಗಾಳಿ ಮುಸ್ಲಿಂ ಸಮುದಾಯದ ಮತದಾನ ಹಕ್ಕನ್ನು ಕಸಿಯುವ ಉದ್ದೇಶವನ್ನೂ ಈ ಎನ್‍ ಆರ್ ಸಿ  ಹೊಂದಿದೆ ಎಂದು ಆಯೋಗ ಅಭಿಪ್ರಾಯ ಪಟ್ಟಿತಲ್ಲದೆ ಅಂತಿಮ ಎನ್‍ ಆರ್ ಸಿ ಪಟ್ಟಿಯಿಂದ 19 ಲಕ್ಷ ಜನರನ್ನು ಹೊರಗಿಟ್ಟಿರುವ ಕುರಿತಂತೆಯೂ ತನ್ನ ಕಳವಳ ವ್ಯಕ್ತಪಡಿಸಿದೆ.

ಈ ರಾಷ್ಟ್ರೀಯ ಪೌರತ್ವ ನೋಂದಣಿ ಮೂಲಕ ಬಿಜೆಪಿ ಸರಕಾರವು ತನ್ನ ಮುಸ್ಲಿಮರ ಕುರಿತಾದ ಪಕ್ಷಪಾತಿ ಧೋರಣೆಯನ್ನು ತೋರಿಸಿದೆ ಎಂದೂ ಆಯೋಗ ತಿಳಿಸಿದೆಯಲ್ಲದೆ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯವು ಇನ್ನಷ್ಟು ಇಳಮುಖವಾಗಿರುವ ಒಂದು ದೃಷ್ಟಾಂತ ಇದಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News