ಸ್ವಂತ ಮಾಧ್ಯಮಗಳನ್ನು ಆರಂಭಿಸುತ್ತಿರುವ ರಾಜಕೀಯ ಪಕ್ಷಗಳಿಂದ ಪತ್ರಿಕೋದ್ಯಮ ಮೌಲ್ಯಗಳ ರಾಜಿ: ವೆಂಕಯ್ಯ ನಾಯ್ಡು

Update: 2019-11-16 13:31 GMT

ಹೊಸದಿಲ್ಲಿ, ನ.16: ಇಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಉದ್ಯಮ ಗುಂಪುಗಳೂ ತಮ್ಮದೇ ಸ್ವಂತ ವೃತ್ತಪತ್ರಿಕೆಗಳು ಮತ್ತು ವಾಹಿನಿಗಳನ್ನು ಆರಂಭಿಸುವ ಮೂಲಕ ತಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ಉತ್ತೇಜಿಸುತ್ತಿವೆ ಮತ್ತು ಪತ್ರಿಕೋದ್ಯಮದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿವೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಶನಿವಾರ ಇಲ್ಲಿ ಹೇಳಿದರು.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನ ಮತ್ತು ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆಗಾಗಿ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ರಾಜಕೀಯ ಪಕ್ಷವೊಂದು ವೃತ್ತಪತ್ರಿಕೆಯನ್ನು ನಡೆಸುತ್ತಿದ್ದರೆ ಹಾಗೆಂದು ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದರು.

ಸಂವೇದನಾಶೀಲತೆಯ ಸಂದರ್ಭಗಳಲ್ಲಿ ಎಚ್ಚರಿಕೆಯನ್ನು ವಹಿಸುವಂತೆ ಪತ್ರಕರ್ತರನ್ನು ಆಗ್ರಹಿಸಿದ ಅವರು,ಸಂವೇದನಾಶೀಲತೆ ಇಂದು ದಿನದ ವಾಡಿಕೆಯಾಗಿದೆ,ಸಂವೇದನಾಶೀಲ ಸುದ್ದಿಗಳು ಅರ್ಥವಿಲ್ಲದ ಸುದ್ದಿಗಳಾಗಿಬಿಟ್ಟಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News