ದೇಶದ ಐಟಿ ಕಂಪನಿಗಳಿಂದ 40,000 ನೌಕರರ ವಜಾ ಸಾಧ್ಯತೆ: ಮೋಹನದಾಸ ಪೈ

Update: 2019-11-18 17:50 GMT

ಹೊಸದಿಲ್ಲಿ, ನ.18: ಬೆಳವಣಿಗೆಯ ಮಂದಗತಿಯಿಂದಾಗಿ ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳು ಈ ವರ್ಷ 30,000ದಿಂದ 40,0000ದಷ್ಟು ಮಧ್ಯಮ ಶ್ರೇಣಿಯ ನೌಕರರನ್ನು ವಜಾಗೊಳಿಸಬಹುದು ಎಂದು ಉದ್ಯಮ ತಜ್ಞ ಟಿ.ವಿ.ಮೋಹನದಾಸ ಪೈ ಅವರು ಹೇಳಿದ್ದಾರೆ.

ಉದ್ಯಮದ ಪಕ್ವತೆಯೊಡನೆ ಉದ್ಯೋಗ ನಷ್ಟವು ಪ್ರತಿ ಐದು ವರ್ಷಗಳಿಗೆ ಸಂಭವಿಸುವ ಸಹಜ ವಿದ್ಯಮಾನವಾಗಿದೆ ಎಂದು ಸೋಮವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದ ಪೈ,ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿರುವಂತೆ ಭಾರತದಲ್ಲಿಯೂ ತಾವು ಪಡೆಯುವ ವೇತನಕ್ಕೆ ನ್ಯಾಯ ಒದಗಿಸಲಾಗದ ಹಲವಾರು ಜನರು ಮಧ್ಯಮ ಶ್ರೇಣಿಯ ಉದ್ಯೋಗಿಗಳಲ್ಲಿರುತ್ತಾರೆ ಎಂದರು.

ಕಂಪನಿಗಳು ಬೆಳೆಯುತ್ತಿರುವಾಗ ಬಡ್ತಿಗಳನ್ನು ನೀಡುವುದು ಸರಿ,ಆದರೆ ಬೆಳವಣಿಗೆ ಕುಂಠಿತಗೊಂಡಾಗ ಹೆಚ್ಚು ವೇತನ ಪಡೆಯುವವರು ಉನ್ನತ ಸ್ತರದಲ್ಲಿ ಜಮಾವಣೆಗೊಂಡಿರುತ್ತಾರೆ. ಹೀಗಾಗಿ ಕಂಪನಿಗಳಿಗೆ ತಮ್ಮ ಉದ್ಯೋಗ ಸ್ವರೂಪಗಳ ಪರಿಷ್ಕರಣೆ ಮತ್ತು ಉದ್ಯೋಗಿಗಳ ವಜಾ ಅನಿವಾರ್ಯವಾಗುತ್ತದೆ ಎಂದು ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಹಾಗೂ ಅರಿನ್ ಕ್ಯಾಪಿಟಲ್ ಆ್ಯಂಡ್ ಮಣಿಪಾಲ ಗ್ಲೋಬಲ್ ಎಜ್ಯುಕೇಶನ್ ಸರ್ವಿಸಸ್‌ನ ಅಧ್ಯಕ್ಷ ಪೈ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News