‘ಕೆಂಪುಕೋಟೆ, ಬಿರಿಯಾನಿ ನಮಗೆ ಕೊಟ್ಟವರು ಅವರೇ’: ಟ್ವೀಟರ್ ನಲ್ಲಿ ಟ್ರೆಂಡ್ ಆದ ಮೊಗಲ್ ಚರಿತ್ರೆ

Update: 2019-11-20 18:32 GMT
ಫೋಟೊ ಕೃಪೆ: Adnan Abidi/Reuters

ಹೊಸದಿಲ್ಲಿ, ನ. 20: ಮರಾಠ ಸೇನಾನಿ ತಾನಾಜಿ ಮಾಲುಸರೆ ಕುರಿತ ‘ತಾನಾಜಿ: ದಿ ಅನ್‌ಸಂಗ್ ವಾರಿಯರ್’ ಚಿತ್ರದ ಟ್ರೈಲರ್ ಬಿಡುಗಡೆ ಸಂದರ್ಭ ತಾನಾಜಿ ಪಾತ್ರ ನಿರ್ವಹಿಸಿರುವ ಅಜಯ್ ದೇವಗನ್ ನೀಡಿದ ‘ಈ ಚಿತ್ರ ಮೊಘಲ್ ಸಾಮ್ರಾಜ್ಯದ ಮೇಲಿನ ಸರ್ಜಿಕಲ್ ದಾಳಿ’ ಎಂಬ ಹೇಳಿಕೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮೊಗಲ್ ಸಾಮ್ರಾಜ್ಯದ ಬಗ್ಗೆ ನೀಡಿದ ಅವಮಾನಕರ ಹೇಳಿಕೆ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಉದ್ಯಮಿ ಇರೇನಾ ಅಕ್ಬರ್, ಉಪಖಂಡದಲ್ಲಿ ಮೊಗಲರು ಬಿಟ್ಟು ಹೋಗಿರುವ ಸಾಂಸ್ಕೃತಿಕ ಗುರುತುಗಳ ಫೋಟೊಗಳನ್ನು ಪೋಸ್ಟ್ ಮಾಡುವಂತೆ ಟ್ವಟರ್ ಬಳಕೆದಾರರಿಗೆ ಕರೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟಗರು ಹುಮಾಯುನ್ ಸಮಾಧಿ, ಕೆಂಪುಕೋಟೆ, ತಾಜ್‌ಮಹಲ್, ಬಿರಿಯಾನಿ, ಚೂಡಿದಾರ ಪೈಜಾಮದ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ತಾಜಮಹಲ್‌ನಿಂದ 21 ಕೋಟಿ ರೂಪಾಯಿ, ಕುತುಬ್ ಸಂಕೀರ್ಣದಿಂದ 10 ಕೋಟಿ ರೂಪಾಯಿ, ಕೆಂಪು ಕೋಟೆ ಹಾಗೂ ಹುಮಾಯುನ್ ಸಮಾಧಿಯಿಂದ ತಲಾ 6 ಕೋಟಿ ರೂಪಾಯಿ ಪ್ರವಾಸಿಗರಿಗೆ ಟಿಕೆಟ್ ಮಾರಾಟ ಮಾಡುವ ಮೂಲಕ ಸಂಗ್ರಹವಾಗುತ್ತಿದೆ ಎಂದು ಟ್ವಿಟಗರೊಬ್ಬರು ಹೇಳಿದ್ದಾರೆ.

ಮೊಗಲರ ಕೊಡುಗೆಗಳ ಬಗ್ಗೆ ವಿವರಿಸುವ ಟ್ವೀಟ್ ಗಳು ಈ ಕೆಳಗಿವೆ…

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News