ಆರ್‌ಟಿಐ ಅರ್ಜಿಗಳ ತಿರಸ್ಕಾರ: ಬುಡಕಟ್ಟು ವ್ಯವಹಾರಗಳು ಮತ್ತು ಗೃಹ ಸಚಿವಾಲಯಗಳು ಮುಂದು

Update: 2019-11-22 17:29 GMT

ಹೊಸದಿಲ್ಲಿ, ನ.22: ಆರ್‌ಟಿಐ ಕಾಯ್ದೆಯಡಿ ಸಲ್ಲಿಸಲಾಗಿದ್ದ ಹೆಚ್ಚಿನ ಅರ್ಜಿಗಳನ್ನು ತಿರಸ್ಕರಿಸಿರುವ ಕೆೇಂದ್ರ ಸರಕಾರದ ಇಲಾಖೆಗಳ ಪೈಕಿ ಬುಡಕಟ್ಟು ವ್ಯವಹಾರಗಳು ಮತ್ತು ಗೃಹ ಸಚಿವಾಲಯಗಳು ಅಗ್ರಸ್ಥಾನದಲ್ಲಿವೆ ಎಂದು ಈ ವಾರ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲಾದ ಕೇಂದ್ರ ಮಾಹಿತಿ ಆಯೋಗದ ವಾರ್ಷಿಕ ವರದಿಯು ತಿಳಿಸಿದೆ.

2018-19ರಲ್ಲಿ ಸಲ್ಲಿಸಲಾಗಿದ್ದ 13.70 ಲಕ್ಷ ಆರ್‌ಟಿಐ ಅರ್ಜಿಗಳ ಪೈಕಿ 64,334 (ಶೇ.4.70) ಅರ್ಜಿಗಳು ತಿರಸ್ಕೃತಗೊಂಡಿವೆ. ಕಳೆದ ವರ್ಷ ಶೇ.5.13ರಷ್ಟು ಅರ್ಜಿಗಳು ತಿರಸ್ಕೃತಗೊಂಡಿದ್ದವು. 2017-18ನೇ ಸಾಲಿಗೆ ಹೋಲಿಸಿದರೆ 2018-19ರಲ್ಲಿ ಕೇಂದ್ರ ಸರಕಾರದ ಸಚಿವಾಲಯಗಳು ಮತ್ತು ಇಲಾಖೆಗಳು 1.36 ಲ.(ಶೇ.11) ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದವು ಎಂದು ವರದಿಯು ಹೇಳಿದೆ.

ತಿರಸ್ಕೃತಗೊಂಡ ಅರ್ಜಿಗಳಲ್ಲಿ ಹೆಚ್ಚಿನ ಪಾಲು ಬುಡಕಟ್ಟು ವ್ಯವಹಾರಗಳ ಸಚಿವಾಲಯ (ಶೇ.26.54) ಮತ್ತು ಗೃಹ ವ್ಯವಹಾರಗಳ ಸಚಿವಾಲಯ (ಶೇ.16.41)ಕ್ಕೆ ಸೇರಿವೆ ಎಂದು ಸಿಬ್ಬಂದಿ ಸಚಿವಾಲಯವು ಶುಕ್ರವಾರ ವರದಿಯನ್ನು ಉಲ್ಲೇಖಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News