ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿ ಅವಕಾಶವಾದ: ನಿತಿನ್ ಗಡ್ಕರಿ

Update: 2019-11-22 18:29 GMT

ರಾಂಚಿ, ನ. 22: ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿಯನ್ನು ಅವಕಾಶವಾದ ಎಂದು ಕರೆದಿರುವ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ, ಒಂದು ವೇಳೆ ಅವರು ಮಹಾರಾಷ್ಟ್ರದಲ್ಲಿ ಸರಕಾರ ರಚಿಸಿದರೆ, ಅದು 6ರಿಂದ 8 ತಿಂಗಳು ಕೂಡ ಮುಂದುವರಿಯದು ಎಂದು ಶುಕ್ರವಾರ ಹೇಳಿದ್ದಾರೆ.

  ಜಾರ್ಖಂಡ್‌ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಗಡ್ಕರಿ, ಈ ಸೈದ್ಧಾಂತಿಕ ಭಿನ್ನವಾಗಿರುವ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಮೈತ್ರಿ ಮಾಡಿಕೊಂಡಿರುವುದು ದುರಾದೃಷ್ಟಕರ ಎಂದರು.

 ರಾಜ್ಯದಲ್ಲಿ ನವೆಂಬರ್ 30ರಂದು 5 ಹಂತಗಳ ಚುನಾವಣೆ ನಡೆಯಲಿದೆ.

 ‘‘ಅವರ ಮೈತ್ರಿಯ ಮೂಲಾಧಾರ ಅವಕಾಶವಾದ. ಬಿಜೆಪಿಯಿಂದ ಅಧಿಕಾರದಿಂದ ಹೊರಗಿರಿಸುವ ಒಂದೇ ಉದ್ದೇಶದಿಂದ ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ನನಗೆ ಈ ಸರಕಾರ ರಚನೆಯಾಗುವ ಬಗ್ಗೆ ಅನುಮಾನ ಇದೆ. ಒಂದು ವೇಳೆ ರಚನೆಯಾದರೂ ಸರಕಾರ 6ರಿಂದ 7 ತಿಂಗಳ ಒಳಗೆ ಉರುಳಲಿದೆ’’ ಎಂದು ಗಡ್ಕರಿ ಹೇಳಿದ್ದಾರೆ. ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಮೈತ್ರಿ ಮುರಿದರೆ, ಕಾಂಗ್ರೆಸ್ ಸರಕಾರ ರಚಿಸಲು ಪ್ರಯತ್ನಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅಂತಹ ಸಂದರ್ಭ ಪಕ್ಷ ತನ್ನ ಮುಂದಿನ ಕಾರ್ಯತಂತ್ರ ನಿರ್ಧರಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News