‘ಕಕ್ಕೂಸ್’ ಚಿತ್ರ ನಿರ್ದೇಶಕಿ ವಿರುದ್ಧದ ಎಫ್‌ಐಆರ್ ರದ್ದು ​

Update: 2019-11-22 18:37 GMT
Divya Bharathi. Photo: Facebook/Divya Bharathi

 ಹೊಸದಿಲ್ಲಿ, ನ. 22: ಮಲ ಹೊರುವ ಕಾರ್ಮಿಕರ ಬದುಕಿನ ಕುರಿತ ‘ಕಕ್ಕೂಸ್’ ಸಾಕ್ಷಚಿತ್ರ ನಿರ್ದೇಶಿಸಿದ ನಿರ್ದೇಶಕಿ ದಿವ್ಯಾ ಭಾರತಿ ವಿರುದ್ಧ ಸಲ್ಲಿಸಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಲಾಗಿದೆ.

 ಸಾಕ್ಷಚಿತ್ರದಲ್ಲಿ ಭಾರತಿ ಅವರು ದೇವೇಂದ್ರ ಕುಲಾ ವೆಲ್ಲಾಲರ್ ಸಮುದಾಯವನ್ನು ತಪ್ಪಾಗಿ ಚಿತ್ರಿಸಿದ್ದಾರೆ ಎಂದು ಆರೋಪಿಸಿ ನ್ಯಾಯವಾದಿ ಹಾಗೂ ಪುದಿಯ ತಮಿಳಗಂ ಪಕ್ಷದ ನಾಯಕ ಭಾಸ್ಕರ್ ಮಧುರಂ 2017ರಲ್ಲಿ ಎಫ್‌ಐಆರ್ ದಾಖಲಿಸಿದ್ದರು.

 ಭಾರತಿ ಅವರ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಿ ನವೆಂಬರ್ 20ರಂದು ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಆದೇಶ ನೀಡಿದ್ದಾರೆ.

ನಿರ್ದಿಷ್ಟ ಪರಿಶಿಷ್ಟ ಜಾತಿಯ ಸದಸ್ಯರು ಈಗಲೂ ಮಲ ಹೊರುವ ಪದ್ಧತಿಯಲ್ಲಿ ತೊಡಗಿಕೊಳ್ಳುವಂತೆ ಬಲವಂತಪಡಿಸಲಾಗಿದೆ ಎಂದು ಅವರ ಎರಡು ವರ್ಷಗಳ ಸಂಶೋಧನೆ ಹೇಳಿದ ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News