ಬ್ರಿಟನ್: ಭಾರತೀಯ ವಿದ್ಯಾರ್ಥಿಗಳ ವೀಸಾದಲ್ಲಿ 63 ಶೇ. ಹೆಚ್ಚಳ

Update: 2019-11-29 17:18 GMT

ಲಂಡನ್, ನ. 29: ಕಳೆದ ವರ್ಷ ವಿವಿಧ ಬ್ರಿಟಿಶ್ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾದ ವೀಸಾ ಪ್ರಮಾಣದಲ್ಲಿ 63 ಶೇಕಡ ಹೆಚ್ಚಳವಾಗಿದೆ ಎಂದು ಬ್ರಿಟನ್ ಸರಕಾರ ಗುರುವಾರ ಹೇಳಿದೆ.

2019 ಸೆಪ್ಟಂಬರ್‌ನಲ್ಲಿ ಕೊನೆಯಾದ ವರ್ಷದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ 30,550 ‘ಟಯರ್ 4 ಸ್ಟಡಿ ವೀಸಾ’ಗಳನ್ನು ನೀಡಲಾಗಿದೆ ಎಂದು ಬ್ರಿಟನ್‌ನ ರಾಷ್ಟ್ರೀಯ ಅಂಕಿಸಂಖ್ಯೆ ಕಚೇರಿ (ಒಎನ್‌ಎಸ್) ಬಿಡುಗಡೆ ಮಾಡಿದ ಹೊಸ ಅಂಕಿಸಂಖ್ಯೆಗಳ ತಿಳಿಸಿವೆ. ಇದು ಕಳೆದ ವರ್ಷ ನೀಡಲಾದ 18,730 ವೀಸಾಗಳಿಂದ 63 ಶೇಕಡ ಅಧಿಕವಾಗಿದೆ.

ಕಳೆದ 10 ವರ್ಷಗಳ ಅವಧಿಯಲ್ಲಿ ಸುಮಾರು 2,70,000 ಭಾರತೀಯ ವಿದ್ಯಾರ್ಥಿಗಳು ಬ್ರಿಟನ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ ಎಂಬುದಾಗಿಯೂ ಒಎನ್‌ಎಸ್ ಅಂಕಿಸಂಖ್ಯೆಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News