ಲಂಡನ್ ದಾಳಿಯ ಹೊಣೆ ಹೊತ್ತ ಐಸಿಸ್

Update: 2019-12-01 17:31 GMT

ಲಂಡನ್, ಡಿ.1: ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ಶನಿವಾರ ಇಬ್ಬರು ನಾಗರಿಕರು ಮೃತಪಟ್ಟು, ಹಲವರು ಗಾಯಗೊಂಡಂತಹ ಭಯೋತ್ಪಾದಕ ದಾಳಿಯ ಹೊಣೆಯನ್ನು ಕುಖ್ಯಾತ ಭಯೋತ್ಪಾದಕ ಗುಂಪು ಐಸಿಸಿ ವಹಿಸಿಕೊಂಡಿದೆ.

28 ವರ್ಷ ವಯಸ್ಸಿನ ದಾಳಿಕೋರ ಉಸ್ಮಾನ್‌ ಖಾನ್ ಐಸಿಸ್‌ನ ಹೋರಾಟಗಾರರಲ್ಲಿ ಒಬ್ಬನೆಂದು,ಭಯೋತ್ಪಾದಕ ಗುಂಪಿನ ಸುದ್ದಿಜಾಲತಾಣ ಅಮಾಕ್ ಹೇಳಿಕೊಂಡಿರುವುದಾಗಿ, ಬ್ರಿಟನ್‌ನ ಮೆಟ್ರೊ.ಕೊ. ಯುಕೆ ಸುದ್ದಿಸಂಸ್ಥೆ ವರದಿ ಮಾಡಿದೆ,

ಲಂಡನ್‌ನಲ್ಲಿ ದಾಳಿ ನಡೆಸಿದ ವ್ಯಕ್ತಿಯು ಐಸಿಸ್‌ನ ಹೋರಾಟಗಾರ ನಾಗಿದ್ದಾನೆ.ಐಸಿಸ್ ವಿರುದ್ಧ ಯುದ್ಧ ಮಾಡುತ್ತಿರುವ ಸೇನಾಮೈತ್ರಿಕೂಟದ ಸದಸ್ಯ ರಾಷ್ಟ್ರಗಳ ಜನರ ಮೇಲೆ ದಾಳಿ ನಡೆಸುವಂತೆ ನೀಡಲಾದ ಕರೆಗಳಿಂಗೆ ಉತ್ತರವಾಗಿ ಆತ ಈ ದಾಳಿ ನಡೆಸಿದ್ದಾನೆ ಎಂದು ಅಮಾಕ್‌ನ ಹೇಳಿಕೆಯು ತಿಳಿಸಿದೆ.

ದಾಳಿ ನಡೆಸಿದ ಉಗ್ರ ಉಸ್ಮಾನ್‌ ಖಾನ್ ಭಯೋತ್ಪಾದಕ ಪ್ರಕರಣಗಳಲ್ಲಿ ದೋಷಿಯಾಗಿದ್ದು, ಆತ ಪರೋಲ್‌ನಲ್ಲಿ ಜೈಲಿನಿಂದ ಹೊರಬಂದಿದ್ದ. ಶುಕ್ರವಾರ ಮಧ್ಯಾಹ್ನ ಲಂಡನ್ ಬ್ರಿಡ್ಜ್ ಪಕ್ಕದ ಹಾಲ್ ಒಂದರಲ್ಲಿ ನಡೆಯುತ್ತಿದ್ದ ಕೈದಿಗಳ ಪುನರ್ವಸತಿ ಕುರಿತಾಗಿ ಆಕ್ಸ್‌ಫರ್ಡ್ ವಿವಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ಮಾಜಿ ಕೈದಿಗಳನ್ನು ಗುರಿಯಿರಿಸಿ ಆತ ಚೂರಿಯಿಂದ ದಾಳಿ ನಡೆಸಿ ಇಬ್ಬರನ್ನು ಹತ್ಯೆಗೈದಿದ್ದು, ಹಲವರನ್ನು ಗಾಯಗೊಳಿಸಿದ್ದ. ಆನಂತರ ಸಾರ್ವಜನಿಕರು ಆತನನ್ನು ನೆಲಕ್ಕೆ ಕೆಡಹಿದಾಗ, ಪೊಲೀಸರು ಗುಂಡಿಕ್ಕಿ ಕೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News