3,000 ಕಿ.ಮೀ. ಉದ್ದದ ರಶ್ಯ-ಚೀನಾ ಅನಿಲ ಪೈಪ್‌ಲೈನ್‌ಗೆ ಚಾಲನೆ

Update: 2019-12-02 18:06 GMT

ಮಾಸ್ಕೊ, ಡಿ. 2: ರಶ್ಯ ಮತ್ತು ಚೀನಾಗಳ ನಡುವಿನ ಬೃಹತ್ ಅನಿಲ ಪೈಪ್‌ ಲೈನ್‌ಗೆ ಸೋಮವಾರ ಚಾಲನೆ ನೀಡಲಾಗಿದೆ. ಇದು ಜಗತ್ತಿನ ಅತಿ ದೊಡ್ಡ ಅನಿಲ ಪೂರೈಕೆದಾರ ಎಂಬ ರಶ್ಯದ ಹೆಗ್ಗಳಿಕೆಯನ್ನು ಬಲಪಡಿಸುವ ಮೂರು ಬೃಹತ್ ಅನಿಲ ಯೋಜನೆಗಳ ಪೈಕಿ ಒಂದಾಗಿದೆ.

ವೀಡಿಯೊ ಕೊಂಡಿಯ ಮೂಲಕ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ‘ಪವರ್ ಆಫ್ ಸೈಬೀರಿಯ’ ಪೈಪ್‌ಲೈನನ್ನು ಉಭಯ ದೇಶಗಳ ನಡುವಿನ ಸಹಕಾರದ ಸಂಕೇತ ಎಂಬುದಾಗಿ ಬಣ್ಣಿಸಿದರು.

 3,000 ಕಿ.ಮೀ. ಉದ್ದದ ಪೈಪ್‌ ಲೈನ್ ಪೂರ್ವ ಸೈಬೀರಿಯದ ದುರ್ಗಮ ಪ್ರದೇಶಗಳನ್ನು ಹಾದು ಚೀನಾದ ಗಡಿಯಲ್ಲಿರುವ ಬ್ಲಾಗೊವೆಶ್ಚೆಂಸ್ಕ್ ತಲುಪುತ್ತದೆ. ಯೋಜನೆಯು 2025ರಲ್ಲಿ ಸಂಪೂರ್ಣವಾಗಿ ಬಳಕೆಗೆ ಸಿದ್ಧವಾಗುವಾಗ ಪ್ರತಿ ವರ್ಷ ಚೀನಾಕ್ಕೆ 3800 ಕೋಟಿ ಕ್ಯೂಬಿಕ್ ಮೀಟರ್ ಅನಿಲವನ್ನು ಚೀನಾಕ್ಕೆ ಸಾಗಿಸುತ್ತದೆ.

400 ಬಿಲಿಯ ಡಾಲರ್ (ಸುಮಾರು 28.67 ಲಕ್ಷ ಕೋಟಿ ರೂಪಾಯಿ) ವೆಚ್ಚದ ಯೋಜನೆಗೆ ಉಭಯ ದೇಶಗಳು 2014ರಲ್ಲಿ ಸಹಿ ಹಾಕಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News