ಪಾಕ್ ಸೇನೆಯಿಂದ ಶೆಲ್ ದಾಳಿ: ಓರ್ವ ಮಹಿಳೆ ಸಾವು, 8 ಮಂದಿಗೆ ಗಾಯ

Update: 2019-12-03 17:48 GMT
Photo: PTI

 ಜಮ್ಮು, ಡಿ. 3: ಜಮ್ಮು ಹಾಗೂ ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಮುಂಚೂಣಿ ಠಾಣೆ ಹಾಗೂ ಗ್ರಾಮಗಳ ಮೇಲೆ ಪಾಕಿಸ್ತಾನ ಸೇನೆ ಮಂಗಳವಾರ ಶೆಲ್ ದಾಳಿ ನಡೆಸಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಹಾಗೂ 8 ಮಂದಿ ಗಾಯಗೊಂಡಿದ್ದಾರೆ.

ಶಹಾಪುರ ಹಾಗೂ ಕಿರ್ನಿ ವಲಯಗಳ ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಗುಂಡು ಹಾಗೂ ಶೆಲ್ ದಾಳಿಗೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿತು ಎಂದು ರಕ್ಷಣಾ ವಕ್ತಾರ ತಿಳಿಸಿದ್ದಾರೆ.

 ‘‘ಅಪರಾಹ್ನ ಸುಮಾರು 2.30ರ ಹೊತ್ತಿಗೆ ಪಾಕಿಸ್ತಾನ ಸೇನೆ ಎರಡು ವಲಯಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತವಾಗಿ ಸಣ್ಣ ಶಸ್ತ್ರಾಸ್ತ್ರ ಹಾಗೂ ಶೆಲ್ ಬಳಸಿ ದಾಳಿ ನಡೆಸಿತು. ಇದಕ್ಕೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿತು’’ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಗುಂಡು ಹಾಗೂ ಶೆಲ್ ದಾಳಿಯಿಂದ ಶಹಾಪುರ ವಲಯದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. 8 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News