ಪೋಲ್ಯಾಂಡ್ ಸ್ಕಿ ರಿಸಾರ್ಟ್‌ನಲ್ಲಿ ಸ್ಫೋಟ: 4 ಸಾವು

Update: 2019-12-06 16:44 GMT

ವಾರ್ಸಾ (ಪೋಲ್ಯಾಂಡ್), ಡಿ. 6: ಪೋಲ್ಯಾಂಡ್‌ನ ದಕ್ಷಿಣದಲ್ಲಿರುವ ಸ್ಕಿ ರಿಸಾರ್ಟ್ ಒಂದರಲ್ಲಿರುವ ಮನೆಯೊಂದರಲ್ಲಿ ಬುಧವಾರ ನಡೆದ ಸ್ಫೋಟದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 100 ಅಗ್ನಿಶಾಮಕ ಸಿಬ್ಬಂದಿ ಶಿರ್ಕ್‌ನಲ್ಲಿರುವ ಮನೆಯಲ್ಲಿರುವ ಅವಶೇಷಗಳಡಿ ಬದುಕುಳಿದವರಿಗಾಗಿ ಹುಡುಕಾಡುತ್ತಿದ್ದಾರೆ.

ಸ್ಫೋಟ ಸಂಭವಿಸುವಾಗ ಮನೆಯಲ್ಲಿ ಎಂಟು ಮಂದಿ ಇದ್ದಾರೆಂದು ನಂಬಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News