ರಣಜಿ ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ ವಸೀಂ ಜಾಫರ್

Update: 2019-12-09 17:37 GMT

ವಿಜಯವಾಡ, ಡಿ.9: ಹಿರಿಯ ಆರಂಭಿಕ ಆಟಗಾರ ವಸೀಂ ಜಾಫರ್ 150ನೇ ರಣಜಿ ಟ್ರೋಫಿ ಪಂದ್ಯದಲ್ಲಿ ಆಡುವುದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸೋಮವಾರ ಮತ್ತೊಂದು ಮೈಲುಗಲ್ಲು ತಲುಪಿದರು.

ಹಾಲಿ ಚಾಂಪಿಯನ್ ವಿದರ್ಭ ಪರ ಆಡಿದ ಜಾಫರ್ ಆಂಧ್ರ ತಂಡದ ವಿರುದ್ಧ ದೇವಿನೇನಿ ವೆಂಕಟ ರಮಣ ಪ್ರನೀತಾ ಮೈದಾನದಲ್ಲಿ 150ನೇ ರಣಜಿ ಪಂದ್ಯದಲ್ಲಿ ಕಾಣಿಸಿಕೊಂಡರು. ಜಾಫರ್ ಬಳಿಕ ದೇವೇಂದ್ರ ಬಂಡೇಲಾ ಹಾಗೂ ಅಮೋಲ್ ಮುಜುಂದಾರ್ ರಣಜಿಯಲ್ಲಿ ಗರಿಷ್ಠ ಪಂದ್ಯಗಳನ್ನಾಡಿರುವ ಮುಂಬೈ ಆಟಗಾರರಾಗಿದ್ದಾರೆ. ಈ ಇಬ್ಬರು ಕ್ರಮವಾಗಿ 145 ಹಾಗೂ 136 ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡಿದ್ದಾರೆ.

ಜಾಫರ್ ರಣಜಿ ವೃತ್ತಿಜೀವನದಲ್ಲಿ 40 ಶತಕಗಳ ಸಹಿತ ಒಟ್ಟು 11,775 ರನ್ ಗಳಿಸಿದ್ದಾರೆ. ಮುಂಬೈ ಸಂಜಾತ ಬ್ಯಾಟ್ಸ್‌ಮನ್ ಒಟ್ಟು 253 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು 51.19ರ ಸರಾಸರಿಯಲ್ಲಿ 19,147 ರನ್ ಗಳಿಸಿದ್ದಾರೆ.
ಜಾಫರ್ 31 ಟೆಸ್ಟ್ ಹಾಗೂ 2 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ವಿದರ್ಭ ನಾಯಕ ಫೈಝ್ ಫಝಲ್ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆಂಧ್ರ 211 ರನ್ ಗಳಿಸಿ ಆಲೌಟಾಗಿದ್ದು, ವಿದರ್ಭ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News